ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೋಲಿಬಾರ್ ಪ್ರಕರಣ: ಎಚ್.ಕೆ.ಪಾಟೀಲ್‌ಗೆ ಸಮನ್ಸ್ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋಲಿಬಾರ್ ಪ್ರಕರಣ: ಎಚ್.ಕೆ.ಪಾಟೀಲ್‌ಗೆ ಸಮನ್ಸ್ ಜಾರಿ
NRB
ಹಾವೇರಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್‌ಗೆ ನ್ಯಾ.ಜಗನ್ನಾಥ್ ಶೆಟ್ಟಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಗೋಲಿಬಾರ್ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪಾಟೀಲ್, ಹಾವೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶದ ಮಾತುಗಳನ್ನಾಡಿದ್ದರು. ಈ ರೀತಿಯಾಗಿ ಹೇಳಿಕೆ ನೀಡುವುದರಿಂದ ಜನರಲ್ಲಿಯೂ ಗೊಂದಲ ಮೂಡುತ್ತದೆ. ಅಲ್ಲದೇ ವಿಚಾರಣಾ ಆಯೋಗದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಆಯೋಗ, ಆ ನಿಟ್ಟಿನಲ್ಲಿ ಪಾಟೀಲ್ ಹಾಗೂ ಕೆಲವು ಮಾಧ್ಯಮಗಳಿಗೆ ವಿವರಣೆ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಹಾವೇರಿ ಗೋಲಿಬಾರ್ ಪ್ರಕರಣದ ಕುರಿತಂತೆ ಮೇ 28ರಂದು ನಡೆಯಲಿರುವ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಆಯೋಗ ಸೂಚನೆ ನೀಡಿದೆ.

ಘಟನೆ ವಿವರ: ರೈತರ ಮೇಲೆ ಗುಂಡು ಹಾರಿಸಿರುವ ಬಿಜೆಪಿಯವರಿಗೆ ರೈತರ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಗೋಲಿಬಾರ್ ಘಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದರು.

ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ದಿನಗಳಲ್ಲಿಯೇ ರೈತರ ಮೇಲೆ ಗೋಲಿಬಾರ್ ನಡೆಸಿದೆ. ನಂತರ ಜಿಲ್ಲಾಧಿಕಾರಿಗಳಿಂದ ಗೋಲಿಬಾರ್‌ನಿಂದ ಮೃತಪಟ್ಟವರು ರೈತರೇ ಅಲ್ಲ, ಅವರು ಸಾಮಾಜಿಕ ಶಾಂತಿ ಕದಡಲು ಬಂದಿದ್ದರು ಎಂದು ಹೇಳಿಕೆ ಕೊಡಿಸಿದ್ದಾರೆ. ಇದು ಯಾವ ನ್ಯಾಯ ಎಂದು ಆ ಸಂದರ್ಭದಲ್ಲಿ ಖಾರವಾಗಿ ಪ್ರಶ್ನಿಸಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಎಚ್.ಕೆ.ಪಾಟೀಲ್ ಅವರಿಗೆ ಆಯೋಗ ಸಮನ್ಸ್ ಜಾರಿ ಮಾಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೃಂಗೇರಿ: ಐವರು ನಕ್ಸಲ್ ಬೆಂಬಲಿಗರ ಸೆರೆ
ಅರ್ಕಾವತಿ ವಿವಾದ: ರೈತರಿಬ್ಬರು ಆತ್ಮಹತ್ಯೆಗೆ ಯತ್ನ
ರೈತರ ಸಭೆ-ತಾಳ್ಮೆ ಕಳೆದುಕೊಂಡ ಅನಿತಾಕುಮಾರಸ್ವಾಮಿ
ಆದಾಯದಲ್ಲಿ 8024ಕೋಟಿ ರೂ.ಕೊರತೆ: ಯಡಿಯೂರಪ್ಪ
ಆಯುಷ್ ನಿರ್ದೇಶಕ ಡಾ.ಪ್ರಕಾಶ್ 'ನಿರ್ದೋಷಿ'
ವೈದ್ಯರ ಕರ್ತವ್ಯ ನಿರ್ವಹಣೆಗೆ ತಡೆ ಇಲ್ಲ: ಹೈಕೋರ್ಟ್