ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಂಪ್ಯೂಟರ್,ಪೀಠೋಪಕರಣ ಧ್ವಂಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಂಪ್ಯೂಟರ್,ಪೀಠೋಪಕರಣ ಧ್ವಂಸ
ಕಾಲೇಜಿನಲ್ಲಿ ಸಮರ್ಪಕವಾದ ಸೌಕರ್ಯ ಇಲ್ಲ ಎಂದು ಆಕ್ರೋಶಗೊಂಡ ನಗರದ ಬಿಟಿಎಂ ಲೇಔಟ್ ಎನ್.ಎಸ್.ಪಾಳ್ಯದ ಇಕ್ಫಾಯ್ ಕಾಲೇಜಿನ ವಿದ್ಯಾರ್ಧಿಗಳು ಕಾಲೇಜಿನ ಸುಮಾರು 80 ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಗುರುವಾರ ನಡೆದಿದೆ.

ಇಕ್ಫಾಯ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮುಖ್ಯವಾಗಿ ಲೈಬ್ರರಿ, ಪ್ರಯೋಗಾಲಯಗಳ ಕೊರತೆ ಇದೆ. ಈ ಕುರಿತು ಅನೇಕ ಕಾಲೇಜಿನ ಆಡಳಿತ ಮಂಡಳಿಗೆ ವಿದ್ಯಾರ್ಥಿಗಳು ದೂರು ಸಲ್ಲಿಸಿ ಸೌಲಭ್ಯಗಳನ್ನು ಒದಗಿಸಲು ಮನವಿ ಮಾಡಿಕೊಂಡಿದ್ದಾರೆ. ಆದರೆ, ಕಾಲೇಜಿನ ಮುಖ್ಯಸ್ಥರು ಗಮನ ಕೊಡದ ಪರಿಣಾಮ ಇಂದು ರೊಚ್ಚಿಗೆದ್ದ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಾಏಕಿ ಕಾಲೇಜಿಗೆ ನುಗ್ಗಿ ಕಂಪ್ಯೂಟರ್, ಕಾಲೇಜಿನ ಕಿಟಕಿ, ಗಾಜುಗಳನ್ನು ಒಡೆದು ಹಾಕಿದ್ದಾರೆ.

ಉತ್ತರಾಂಚಲ ಮೂಲದ ಕಾಲೇಜು ಇದಾಗಿದ್ದು, ಮಾನ್ಯತೆ ಇಲ್ಲದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಲವು ವಿದ್ಯಾರ್ಥಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಅರ್ಕಾವತಿ' ವಿವಾದಕ್ಕೆ ಎಚ್‌ಡಿಕೆ ಸರ್ಕಾರ ಕಾರಣ: ಸಿಎಂ
ಐಟಿ ಕಂಪೆನಿಗಳಿಗೆ ಸಿಎಂ ನೆರವಿನ ಭರವಸೆ
ಲೆಕ್ಕಪತ್ರ ವಿವಾದ: ಕೆಎಂಎಫ್ ಅಧ್ಯಕ್ಷ ರೇವಣ್ಣಗೆ ಮುಖಭಂಗ
ಇಂಗ್ಲೀಷ್ ಭಾಷೆ ವಿವಾದ: ಸುಪ್ರೀಂಗೆ ಮೇಲ್ಮನವಿ
ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ: ಯಡಿಯೂರಪ್ಪ
ಸಿಎಂ ದಿವಾಳಿ ಸರ್ಕಾರದ ಸುಳ್ಳಿನ ಸರದಾರ: ಜೆಡಿಎಸ್