ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲಾಕಪ್ ಡೆತ್: ಐವರು ಪೊಲೀಸರಿಗಾಗಿ ಸಿಓಡಿ ಶೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಕಪ್ ಡೆತ್: ಐವರು ಪೊಲೀಸರಿಗಾಗಿ ಸಿಓಡಿ ಶೋಧ
ಕಾಣೆಯಾದ ಯುವಕನ ಪತ್ತೆಯ ವಿಚಾರಣೆಗೆ ಕರೆ ತಂದ ವ್ಯಕ್ತಿಯೊಬ್ಬ ಪೊಲೀಸ್ ವಶದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಪೊಲೀಸರಿಗಾಗಿ ಸಿಓಡಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳೆದ ಫೆ.24ರಂದು ಭಾಸ್ಕರ ಎಂಬ ಯುವಕನ ನಾಪತ್ತೆ ಸಂಬಂಧ ವಿಚಾರಣೆಗೆ ಧನಂಜಯ್ ಎಂಬವರನ್ನು ಕರೆ ತರಲಾಗಿತ್ತು. ವಿಚಾರಣೆಗೆ ಕರೆತಂದಿದ್ದ ಧನಂಜಯ ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿದ್ದು, ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿತ್ತು.

ಧನಂಜಯ ವಶದಲ್ಲಿದ್ದಾಗ ಮೃತಪಡಲು ಕಾರಣರಾಗಿದ್ದ ಸಬ್‌ಇನ್ಸ್‌ಪೆಕ್ಟರ್ ನಾಗೇಶ್, ಮುಖ್ಯಪೇದೆಗಳಾದ ಬಸವಣ್ಣಯ್ಯ, ಗೋವಿಂದಯ್ಯ, ಪೇದೆಗಳಾದ ಎಲ್.ಕುಮಾರ ಹಾಗೂ ನಾಗೇಗೌಡ ಅವರು ಅಲ್ಲಿಂದ ಇಲ್ಲಿಯವರೆಗೆ ತಲೆ ಮರೆಸಿಕೊಂಡಿದ್ದಾರೆ.

ಕಳೆದೆರಡು ತಿಂಗಳಿನಿಂದ ಈ ಐವರು ಪೊಲೀಸರ ಸುಳಿವು ಸಿಓಡಿ ಪೊಲೀಸರಿಗೆ ದೊರೆತಿಲ್ಲ. ಇವರ ಬಗ್ಗೆ ಮಾಹಿತಿ ದೊರೆತವರು ಸಿಓಡಿ ಪೊಲೀಸರಿಗಾಗಲಿ, ಕಂಟ್ರೋಲ್ ರೂಂಗಳಿಗಾಗಲಿ ಸಂಪರ್ಕಿಸಬಹುದು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೀರ್ಥಹಳ್ಳಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
ಬೆಂಗಳೂರಿನಲ್ಲಿ ಎಚ್‌1ಎನ್‌1 ಸೋಂಕು ಪತ್ತೆ
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಂಪ್ಯೂಟರ್,ಪೀಠೋಪಕರಣ ಧ್ವಂಸ
'ಅರ್ಕಾವತಿ' ವಿವಾದಕ್ಕೆ ಎಚ್‌ಡಿಕೆ ಸರ್ಕಾರ ಕಾರಣ: ಸಿಎಂ
ಐಟಿ ಕಂಪೆನಿಗಳಿಗೆ ಸಿಎಂ ನೆರವಿನ ಭರವಸೆ
ಲೆಕ್ಕಪತ್ರ ವಿವಾದ: ಕೆಎಂಎಫ್ ಅಧ್ಯಕ್ಷ ರೇವಣ್ಣಗೆ ಮುಖಭಂಗ