ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಡಿ ಜಿಲ್ಲೆಗಳಲ್ಲಿ ನಾಡು ನುಡಿ ಜಾಗೃತಿ: ಚಂದ್ರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಡಿ ಜಿಲ್ಲೆಗಳಲ್ಲಿ ನಾಡು ನುಡಿ ಜಾಗೃತಿ: ಚಂದ್ರು
ಜನರಲ್ಲಿ ಕನ್ನಡ ಜಾಗೃತಿ ಮೂಡಿಸಲು ಜೂನ್‌‌ನಿಂದ ನಾಡು-ನುಡಿ ಜಾಗೃತಿ ಜಾಥ ನಡೆಸಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ನಿರ್ಧರಿಸಿದೆ. ಪರಭಾಷಿಕರು ಹೆಚ್ಚಿರುವ ಬೆಂಗಳೂರು ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಗಡಿ ಜಿಲ್ಲೆಗಳಲ್ಲಿ ಈ ಜಾಗೃತಿ ಜಾಥಾ ನಡೆಯಲಿದ್ದು, ನಂತರ ರಾಜ್ಯದ ಮೂಲೆಮೂಲೆಯಲ್ಲೂ ಜಾಥಾ ನಡೆಸಲು ತೀರ್ಮಾನಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಸಾಹಿತಿ ಕಲಾವಿದರನ್ನು ಒಳಗೊಂಡ ಈ ಜಾಥಾ ಪಕ್ಷಾತೀತವಾಗಿದ್ದು ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳನ್ನು ಸೇರ್ಪಡೆ ಮಾಡಿಕೊಂಡು ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗುವುದು. ಜನಸಂದಣಿ ಪ್ರದೇಶಗಳಲ್ಲಿ ಕರಪತ್ರಗಳ ವಿತರಣೆ, ಸಾಹಿತಿ ಮತ್ತು ಕಲಾವಿದರಿಂದ ಸಂದೇಶ ಕೊಡಿಸುವ ಮೂಲಕ ಕನ್ನಡ ಬಳಸುವಂತೆ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಕನ್ನಡ ಅನುಷ್ಠಾನ ವರ್ಷದ ಅಂಗವಾಗಿ ಕನ್ನಡ ಭಾಷಾ ನಾಮಫಲಕ ಅಳವಡಿಸದ 5 ಸಾವಿರ ಮಂದಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕನ್ನಡ ಅನುಷ್ಠಾನ ಕಾರ್ಯದಲ್ಲಿ ಸ್ವಲ್ಪ ವಿಳಂಬವಾಗಿದ್ದು, ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಈ ಪ್ರಯತ್ನ ಮತ್ತಷ್ಟು ಚುರುಕಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ದ್ರೋಹ: ಪುಟ್ಟಸ್ವಾಮಿ
ಲಾಕಪ್ ಡೆತ್: ಐವರು ಪೊಲೀಸರಿಗಾಗಿ ಸಿಓಡಿ ಶೋಧ
ತೀರ್ಥಹಳ್ಳಿ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ
ಬೆಂಗಳೂರಿನಲ್ಲಿ ಎಚ್‌1ಎನ್‌1 ಸೋಂಕಿನ ಶಂಕೆ
ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಂಪ್ಯೂಟರ್,ಪೀಠೋಪಕರಣ ಧ್ವಂಸ
'ಅರ್ಕಾವತಿ' ವಿವಾದಕ್ಕೆ ಎಚ್‌ಡಿಕೆ ಸರ್ಕಾರ ಕಾರಣ: ಸಿಎಂ