ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ: ಕಾಗೇರಿ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ: ಕಾಗೇರಿ ಭರವಸೆ
ಶಿಕ್ಷಕರ ವರ್ಗಾವಣೆಯಲ್ಲಿ ಯಾವುದೇ ಬೇರೆ ಮಾರ್ಗ ಅನುಸರಿಸುವುದಿಲ್ಲ ಪಾರದರ್ಶಕತೆಯಿಂದ ನಡೆಯುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಹಿಂದಿನ ವರ್ಷ ವರ್ಗಾವಣೆ ನಡೆಯದ ಕಾರಣ ಈ ಬಾರಿ ವರ್ಗಾವಣೆ ಬಯಸುವ ಸಂಖ್ಯೆ ಹೆಚ್ಚಾಗಿದೆ. ಕಾಯ್ದೆ ಅನ್ವಯ ಶೇ.5ರಷ್ಟು ಶಿಕ್ಷಕರ ವರ್ಗಾವಣೆಗೆ ಮಾತ್ರ ಅವಕಾಶವಿದೆ ಎಂದು ಸಚಿವರು ತಿಳಿಸಿದ್ದಾರೆ. ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಒತ್ತಡ ಹೇರಿ ವರ್ಗಾವಣೆ ಮಾಡಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಅನ್ಯಮಾರ್ಗ ಹಿಡಿದರೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮ್ಯಾನ್ಯುಯಲ್ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವುದು ನಿಷೇಧಿಸಲಾಗಿದೆ. ಈ ರೀತಿಯ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿದರೆ ಅವುಗಳನ್ನು ಅಸಿಂಧುವೆಂದು ಪರಿಗಣಿಸಲಾಗುವುದು ಹಾಗೂ ಅಂಥ ವರ್ಗಾವಣೆಗಳಿಗೆ ಕಾರಣರಾದ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಒಳಗಾಗುವವರು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿಂದುತ್ವದಿಂದ ದೇಶದ ರಕ್ಷಣೆ ಸಾಧ್ಯ: ಶಂಕರಮೂರ್ತಿ
ಅಗತ್ಯವಸ್ತುಗಳ ಬೆಲೆ ನಿಯಂತ್ರಣಕ್ಕಾಗಿ ಸಮಿತಿ: ಹಾಲಪ್ಪ
ಕಚೇರಿಯಲ್ಲಿ ಕುಳಿತುಕೊಳ್ಳಿ: ಸಚಿವರಿಗೆ ಸಿಎಂ ತಾಕೀತು
ಪಿಯುಸಿ ಫಲಿತಾಂಶ ವೆಬ್‌ದುನಿಯಾದಲ್ಲಿ ನಿರೀಕ್ಷಿಸಿ
ಬಿಬಿಎಂಪಿ ಚುನಾವಣೆ ನಡೆಯದಿದ್ದರೆ ಹೋರಾಟ: ಕಾಂಗ್ರೆಸ್
ಘರ್ಷಣೆ ಪ್ರಕರಣ: ಎಸ್‌ಐ, ಕಾನ್‌ಸ್ಟೇಬಲ್ ವರ್ಗಾವಣೆ