ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಡ್ತಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಡ್ತಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ
ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಹ ಶಿಕ್ಷಕರಾಗಿದ್ದು, ಕಳೆದ ವರ್ಷ ಪಿಯು ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ಪಡೆದಿರುವವರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಐದು ದಿನಗಳ ಕಡ್ಡಾಯ ತರಬೇತಿಯನ್ನು ಆಯೋಜಿಸಿದೆ.

ಗುಣಮಟ್ಟದ ಬೋಧನೆಗೆ ಒತ್ತು ನೀಡುವ ಉದ್ದೇಶದಿಂದ ಆಯೋಜಿಸಿರುವ ತರಬೇತಿ ಈ ತಿಂಗಳ 18 ರಿಂದ 29 ರವರೆಗೆ ನಡೆಯಲಿದೆ.

ಬೆಂಗಳೂರು ಮತ್ತು ಮೈಸೂರು ವಿಭಾಗಗಳ ವ್ಯಾಪ್ತಿಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕನ್ನಡ, ಇತಿಹಾಸ ಮತ್ತು ಸಮಾಜಶಾಸ್ತ್ತ್ರ ವಿಷಯಗಳನ್ನು ಬೋಧಿಸುವ ಉಪನ್ಯಾಸಕರಿಗೆ ಮೈಸೂರಿನ ಹೊಸ ಬಿನ್ನಿ ಮಂಟಪ ಬಡಾವಣೆಯಲ್ಲಿರುಬ ಸಂತ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಮೇ 18ರಿಂದ 22ರವರೆಗೆ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗಗಳ ವ್ಯಾಪ್ತಿಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಇತಿಹಾಸ, ಸಮಾಜಶಾಸ್ತ್ತ್ರ ಮತ್ತು ಕನ್ನಡ ವಿಷಯ ಬೋಧಿಸುವ ಉಪನ್ಯಾಸಕರಿಗೆ ಧಾರವಾಡದ ಆರ್ಎಸ್ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.

ಸಹ ಶಿಕ್ಷಕ ಹುದ್ದೆಯಿಂದ ಉಪನ್ಯಾಸಕರಾಗಿ ಬಡ್ತಿ ಪಡೆದಿರುವ ಎಲ್ಲರಿಗೂ ಈ ತರಬೇತಿ ಕಡ್ಡಾಯವಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜ್ಯಕ್ಕೆ ಕೋಕಾ ಅಗತ್ಯವಿಲ್ಲ: ಖರ್ಗೆ
ಕನ್ನಡಕ್ಕೆಶಾಸ್ತ್ರೀಯ ಸ್ಥಾನ: ಕೇಂದ್ರದಿಂದ ಅಧಿಕೃತ
ಪಿಯುಸಿ: ಶೇ.43, ವಿದ್ಯಾರ್ಥಿನಿಯರೇ ಮುಂದು
ಶಿರಾಡಿ ಘಾಟ್ ದುರಸ್ತಿ ಪೂರ್ಣ
ಅಮೆರಿಕಾ ಮೇಲೆ ಒತ್ತಡ ತನ್ನಿ: ದೇಶಪಾಂಡೆ
ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ: ಕಾಗೇರಿ ಭರವಸೆ