ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಓಬಳಾಪುರಂ ಗಣಿಗಾರಿಕೆ ಸ್ಥಗಿತವಿಲ್ಲ: ಜನಾರ್ದನ ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಬಳಾಪುರಂ ಗಣಿಗಾರಿಕೆ ಸ್ಥಗಿತವಿಲ್ಲ: ಜನಾರ್ದನ ರೆಡ್ಡಿ
ಆಂಧ್ರ ಪ್ರದೇಶ ಹೈಕೋರ್ಟಿನ ವಿಭಾಗೀಯ ಪೀಠದ ಆದೇಶದನ್ವಯ ತಮ್ಮ ಮಾಲಿಕತ್ವದ ಓಬಳಾಪುರಂ ಗಣಿ ಸಂಸ್ಥೆ ಗಣಿಗಾರಿಕೆ ನಡೆಸುತ್ತಿದ್ದು, ಗಣಿಗಾರಿಕೆ ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಿರಿಒಯ ಅಧಿಕಾರಿ ಬಿ.ಕೆ.ಸಿಂಗ್ ಅವರು ನೀಡಿದ್ದ ಆದೇಶವನ್ನು ಕೇಂದ್ರ ಸರ್ಕಾರವೇ 24 ಗಂಟೆಗಳಲ್ಲಿ ತಡೆ ಹಿಡಿದಿದೆ. ಸರ್ವೋಚ್ಛ ನ್ಯಾಯಾಲಯ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿ ಸಿಂಗ್ ಅವರನ್ನು ಕಾಣದ ಕೈಗಳು ಕತ್ತಲೆಯಲ್ಲಿಟ್ಟಿದ್ದರಿಂದ ಗೊಂದಲಗಳು ಸೃಷ್ಟಿಯಾದವು ಎಂದು ರೆಡ್ಡಿ ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವಿ.ಎಸ್.ಉಗ್ರಪ್ಪ, ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಇಲ್ಲ ಸಲ್ಲದ ಆರೋಪ ಮಾಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ. ಆದರೆ ಕೆಲವು ಮಾಧ್ಯಮಗಳು ತಪ್ಪು ಮಾಹಿತಿ ನೀಡುತ್ತಿರುವುದು ತಮಗೆ ಅಚ್ಚರಿ ಮೂಡಿಸಿದೆ. ತಾವು ಅಪಾರವಾಗಿ ಗೌರವಿಸುವ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಕಟವಾಗುವುದು ನೋವು ತಂದಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಎನ್‌‌ಡಿಎ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಕ್ಷದ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರು ಪ್ರಧಾನ ಮಂತ್ರಿಗಳಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಲೇಜುಗಳ ಶೂನ್ಯ ಸಂಪಾದನೆ: ತನಿಖೆಗೆ ತಜ್ಞರ ತಂಡ
ಬಡ್ತಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ
ರಾಜ್ಯಕ್ಕೆ ಕೋಕಾ ಅಗತ್ಯವಿಲ್ಲ: ಖರ್ಗೆ
ಕನ್ನಡಕ್ಕೆಶಾಸ್ತ್ರೀಯ ಸ್ಥಾನ: ಕೇಂದ್ರದಿಂದ ಅಧಿಕೃತ
ಪಿಯುಸಿ: ಶೇ.43, ವಿದ್ಯಾರ್ಥಿನಿಯರೇ ಮುಂದು
ಶಿರಾಡಿ ಘಾಟ್ ದುರಸ್ತಿ ಪೂರ್ಣ