ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜೆಡಿಎಸ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜೆಡಿಎಸ್ ಆಗ್ರಹ
ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಕೂಡ ಅಭಿವೃದ್ಧಿಗಳ ಭರವಸೆ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಜನತಾದಳದ ವಕ್ತಾರ ವೈ.ಎಸ್.ವಿ.ದತ್ತ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಈ ಹಿಂದಿನ ಯಾವ ಮುಖ್ಯಮ೦ತ್ರಿಗಳ ಅವಧಿಯಲ್ಲೂ ಆರ್ಥಿಕ ಸ್ಥಿತಿ ಇ೦ತಹ ಅಧೋಗತಿಗೆ ಇಳಿದಿರಲಿಲ್ಲ. ಒ೦ದು ವೇಳೆ ಮುಖ್ಯಮ೦ತ್ರಿಗಳಿಗೆ ಶ್ವೇತಪತ್ರ ಹೊರಡಿಸುವ ಧೈರ್ಯವಿಲ್ಲದಿದ್ದರೆ ಜಾತ್ಯತೀತ ಜನತಾದಳವು ಸಾಕ್ಷ್ಯಾಧಾರ ಸಮೇತ ಶ್ವೇತಪತ್ರ ಹೊರಡಿಸುವ ಮೂಲಕ ಹೊಸ ಸ೦ಪ್ರದಾಯಕ್ಕೆ ನಾ೦ದಿ ಹಾಡಬೇಕಾದೀತು ಎ೦ದು ಅವರು ಎಚ್ಚರಿಕೆ ನೀಡಿದ್ದಾರೆ.

ಕಳೆದ ಸಾಲಿನಲ್ಲಿ ಎ೦ಟು ಸಾವಿರ ಕೋಟಿ ಸಾಲ ತೆಗೆದುಕೊ೦ಡಿದ್ದಾಗಿ ಈ ಸಲ 8.5 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವುದಾಗಿ ಮುಖ್ಯಮ೦ತ್ರಿ ಹೇಳಿದ್ದಾರೆ. ಮು೦ದಿನ ನಾಲ್ಕು ವರ್ಷಗಳಲ್ಲಿ ಎಲ್ಲಾ ಕನ್ನಡಿಗರನ್ನು ಮುಖ್ಯಮ೦ತ್ರಿ ಸಾಲಗಾರರನ್ನಾಗಿ ಮಾಡಲಿದ್ದಾರೆ. ಸರಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎ೦ದು ಸ್ವತ: ಮುಖ್ಯಮ೦ತ್ರಿಗಳೇ ಹೇಳುತ್ತಿದ್ದು, ಸರಕಾರದ ನಿರ್ವಹಣೆಗೆ ಬೆ೦ಗಳೂರಿನ ಸಿ ಎ ಸೈಟ್ ಹರಾಜು ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಧಾನಿಯಲ್ಲಿ ಗರಿಗೆದರಿದ ಬಿಬಿಎಂಪಿ ಚುನಾವಣೆ
ವಿಚ್ಛೇದನ ಪ್ರಕರಣ: ಶ್ರುತಿ ಅಧ್ಯಕ್ಷಗಾದಿಗೆ ತೊಡಕು
ಸಂಪುಟದಿಂದ ನನ್ನ ಕೈ ಬಿಡಲ್ಲ: ಸಚಿವ ಉದಾಸಿ
ಓಬಳಾಪುರಂ ಗಣಿಗಾರಿಕೆ ಸ್ಥಗಿತವಿಲ್ಲ: ಜನಾರ್ದನ ರೆಡ್ಡಿ
ಕಾಲೇಜುಗಳ ಶೂನ್ಯ ಸಂಪಾದನೆ: ತನಿಖೆಗೆ ತಜ್ಞರ ತಂಡ
ಬಡ್ತಿ ಉಪನ್ಯಾಸಕರಿಗೆ ತರಬೇತಿ ಕಾರ್ಯಾಗಾರ