ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿದ್ಯುತ್ ಬವಣೆ ನೀಗಿಸಲು ಶೀಘ್ರವೇ ಸಭೆ: ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದ್ಯುತ್ ಬವಣೆ ನೀಗಿಸಲು ಶೀಘ್ರವೇ ಸಭೆ: ಈಶ್ವರಪ್ಪ
ಮುಂಬರುವ ವರ್ಷ ರಾಜ್ಯದ ವಿದ್ಯುತ್ ಬೇಡಿಕೆಯ ಪ್ರಮಾಣ 145ಮಿಲಿಯನ್ ಯೂನಿಟ್‌ಗಳಿಗೇರುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವ ಕಾರ್ಯತಂತ್ರವನ್ನು ರೂಪಿಸಲು ಮಹತ್ವದ ಸಂಪುಟ ಉಪಸಮಿತಿ ಸಭೆ ನಡೆಸುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ವಿದ್ಯುತ್ ಬೇಡಿಕೆಯ ಪ್ರಮಾಣ 142ಮಿಲಿಯನ್ ಯೂನಿಟ್‌ಗಳಿಗೇರಿದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಹೀಗಾಗಿಯೇ ವಿದ್ಯುತ್ ಪರಿಸ್ಥಿತಿಯನ್ನು ಅವಲೋಕಿಸಲು ನೇಮಿಸಲಾದ ಸಂಪುಟ ಉಪಸಮಿತಿ ಸಭೆಯನ್ನು ಮೇ 13ರಂದು ನಡೆಸಲಾಗುವುದು ಎಂದರು. ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಸದ್ಯಕ್ಕೆ ಪ್ರತಿನಿತ್ಯ 112 ಮಿಲಿಯನ್ ಯೂನಿಟ್‌ಗಳಷ್ಟಿದೆ ಎಂದು ವಿವರಿಸಿದರು.

ಮೇನಲ್ಲಿ ಬೇಡಿಕೆ ಪ್ರಮಾಣ ನೂರಾ ನಲವತ್ತು ಮಿಲಿಯನ್ ಯೂನಿಟ್‌ಗಳಿಗೇರಬಹುದು ಎಂಬ ನಿರೀಕ್ಷೆ ಇತ್ತಾದರೂ ಮಳೆಯಿಂದಾಗಿ ಅಂತಹ ಸ್ಥಿತಿ ತುಂಬ ಕಾಲ ಉಳಿಯಲಿಲ್ಲ. ಹಮಾಮಾನ ತಜ್ಞರ ಪ್ರಕಾರ ಸದ್ಯದಲ್ಲೇ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದ್ದು ಸೂಕ್ತ ಕಾಲದಲ್ಲಿ ಮಳೆ ಬಂದರೆ ಈ ವರ್ಷದ ಸಮಸ್ಯೆ ಬಗೆ ಹರಿದಂತೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿಎಂ 'ವಿಶ್ರಾಂತಿ'
'ಕೋಕಾ' ಕಾಯ್ದೆ ತಿದ್ದುಪಡಿಗೆ ಡಿಕೆಶಿ ಆಕ್ರೋಶ
ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜೆಡಿಎಸ್ ಆಗ್ರಹ
ರಾಜಧಾನಿಯಲ್ಲಿ ಗರಿಗೆದರಿದ ಬಿಬಿಎಂಪಿ ಚುನಾವಣೆ
ವಿಚ್ಛೇದನ ಪ್ರಕರಣ: ಶ್ರುತಿ ಅಧ್ಯಕ್ಷಗಾದಿಗೆ ತೊಡಕು
ಸಂಪುಟದಿಂದ ನನ್ನ ಕೈ ಬಿಡಲ್ಲ: ಸಚಿವ ಉದಾಸಿ