ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎ ನಿವೇಶನ ಮಾರಾಟವಿಲ್ಲ: ಸಚಿವ ಸುರೇಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎ ನಿವೇಶನ ಮಾರಾಟವಿಲ್ಲ: ಸಚಿವ ಸುರೇಶ್
ಬಿಡಿಎ, ನಗರಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾದ (ಸಿ.ಎ)ನಿವೇಶನಗಳನ್ನು ಹರಾಜಿನ ಮೂಲಕ ಮಾರಾಟ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸಿ.ಎ.ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕೆಲವು ಸಂಘ-ಸಂಸ್ಥೆಗಳಿಗೆ ಸಿ.ಎ.ನಿವೇಶನಗಳನ್ನು ನೀಡಲಾಗಿದೆ. ಅಂಥ ಜಾಗದಲ್ಲಿ ಈಗಾಗಲೇ ಕಟ್ಟಡಗಳು ನಿರ್ಮಾಣಗೊಂಡಿದ್ದರೆ ಆ ನಿವೇಶನವನ್ನು ಆಯಾ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ದರಲ್ಲಿ ಮಾರಾಟ ಮಾಡಬೇಕೆ ಅಥವಾ ಮರು ಗುತ್ತಿಗೆ ನೀಡಬೇಕೆ ಎಂಬ ಬಗ್ಗೆ ಮಾತ್ರವೇ ಇಲಾಖಾ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂಬರೀಷ್ ಅಭಿಮಾನಿಗಳಿಂದ ಜಗ್ಗೇಶ್ ಪ್ರತಿಕೃತಿ ದಹನ
ವಿದ್ಯುತ್ ಬವಣೆ ನೀಗಿಸಲು ಶೀಘ್ರವೇ ಸಭೆ: ಈಶ್ವರಪ್ಪ
ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿಎಂ 'ವಿಶ್ರಾಂತಿ'
'ಕೋಕಾ' ಕಾಯ್ದೆ ತಿದ್ದುಪಡಿಗೆ ಡಿಕೆಶಿ ಆಕ್ರೋಶ
ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜೆಡಿಎಸ್ ಆಗ್ರಹ
ರಾಜಧಾನಿಯಲ್ಲಿ ಗರಿಗೆದರಿದ ಬಿಬಿಎಂಪಿ ಚುನಾವಣೆ