ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೆಡ್‌ಕಾನ್‌ಸ್ಟೇಬಲ್‌‌ನ್ನೇ ಥಳಿಸಿ, ಕೂಡಿ ಹಾಕಿದ ವಕೀಲರು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಡ್‌ಕಾನ್‌ಸ್ಟೇಬಲ್‌‌ನ್ನೇ ಥಳಿಸಿ, ಕೂಡಿ ಹಾಕಿದ ವಕೀಲರು!
ಪೊಲೀಸರು ಶಂಕಿತರನ್ನು, ಆರೋಪಿತರನ್ನು ಬಂಧಿಸುವುದು ಸಾಮಾನ್ಯ. ವಕೀಲರು ಅಂತಹವರನ್ನು ಬಿಡುಗಡೆಗೊಳಿಸುವ ವಿಷಯ ಕೂಡ ಅಷ್ಟೇ. ಆದರೆ ಸೋಮವಾರ ವಕೀಲರೊಬ್ಬರನ್ನು ಬಂಧಿಸಲು ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ಹೆಡ್ ಕಾನ್‌ಸ್ಟೇಬಲ್‌ರೊಬ್ಬರನ್ನು ವಕೀಲರೆಲ್ಲ ಸೇರಿ ಕೂಡಿ ಹಾಕಿರುವ ಘಟನೆ ನಡೆದಿದೆ.

ವಕೀಲ ಸಂತೋಷ್ ಕುಮಾರ್ ಎಂಬವರನ್ನು ಬಂಧಿಸಿ ಕರೆ ತರುವಂತೆ ಜೆಪಿ ನಗರ ಠಾಣೆಯ ಎಸ್.ಐ.ಶ್ರೀನಿವಾಸ್ ಹೇಳಿಕೆಯಂತೆ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಅವರು ನ್ಯಾಯಾಲಯದ ಆವರಣಕ್ಕೆ ಬಂದಾಗ, ಸಂತೋಷ್ ಅವರು ವಾರಂಟ್ ಇಲ್ಲದೆ ಹೇಗೆ ಬಂಧಿಸುತ್ತೀರಿ ಎಂದು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಠಾಣೆಯ ಎಸ್.ಐ. ಶ್ರೀನಿವಾಸ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇದರಿಂದಾಗಿ ವಕೀಲರ ಸಮೂಹ ತೀವ್ರ ವಿರೋಧ ವ್ಯಕ್ತಪಡಿಸಿ, ಬಂಧನಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಅವರನ್ನು ಥಳಿಸಿದ್ದಲ್ಲದೆ, ನಗರದ ಸಿವಿಲ್ ಹಾಗೂ ವಕೀಲ ಸಂಘಟನೆಯ ಕಟ್ಟಡದಲ್ಲಿ ಎರಡು ಗಂಟೆಗಳ ಕಾಲ ಕೂಡಿ ಹಾಕಿದ್ದರು.

ಘಟನೆ ವಿಷಯ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಅವರನ್ನು ವಕೀಲರ ಬಂಧನದಿಂದ ತಪ್ಪಿಸಿದ್ದರು. ವಾರಂಟ್ ಇಲ್ಲದೆ ಸಂತೋಷ್ ಅವರನ್ನು ಬಂಧಿಸಿದರೆ, ಉಗ್ರ ಹೋರಾಟ ನಡೆಸುವುದಾಗಿ ವಕೀಲರ ಸಂಘಟನೆ ಎಚ್ಚರಿಕೆ ನೀಡಿತ್ತು. ಬಳಿಕ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಭಾಷೆ ಕಣ್ಣೊರೆಸುವ ತಂತ್ರ: ಚಂದ್ರು
ಯೋಜನೆಗೆ ಹಣ ಬಿಡುಗಡೆ ಮಾಡದ ಬಿಜೆಪಿ: ಖರ್ಗೆ
ಫಲಿತಾಂಶ: ಸಚಿವರ ತಲೆ ದಂಡ ಇಲ್ಲ
ಸಿಎ ನಿವೇಶನ ಮಾರಾಟವಿಲ್ಲ: ಸಚಿವ ಸುರೇಶ್
ಅಂಬರೀಷ್ ಅಭಿಮಾನಿಗಳಿಂದ ಜಗ್ಗೇಶ್ ಪ್ರತಿಕೃತಿ ದಹನ
ವಿದ್ಯುತ್ ಬವಣೆ ನೀಗಿಸಲು ಶೀಘ್ರವೇ ಸಭೆ: ಈಶ್ವರಪ್ಪ