ಪೊಲೀಸರ ಹಿಟ್ ಲಿಸ್ಟ್ನಲ್ಲಿದ್ದ ಕುಖ್ಯಾತ ರೌಡಿಯೊಬ್ಬನನ್ನು ಇರಿದು ಕೊಲೆ ಮಾಡಿರುವ ಘಟನೆ ನಗರದ ಕಂಕನಾಡಿ ಸಮೀಪ ಮಂಗಳವಾರ ಬೆಳಿಗ್ಗೆ ವರದಿಯಾಗಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಭೂಗತ ಪಾತಕಿ ರವಿ ಪೂಜಾರಿ ಸಹಚರ ಪಾಂಡುರಂಗ ಪೈ ಎಂದು ಗುರುತಿಸಲಾಗಿದೆ. ಈತ ಮಂಗಳೂರಿನವನಾಗಿದ್ದು, ಮುಂಬೈ, ಗುಜರಾತ್, ಸೂರತ್ನಲ್ಲೂ ಈತನ ವಿರುದ್ದ ಕೊಲೆ ಕೇಸುಗಳಿವೆ .
ಪೈ ವಿರುದ್ಧ ಹತ್ತು ವರ್ಷಗಳ ಹಿಂದೆ ಸುರತ್ಕಲ್ನಲ್ಲಿ ದೇಜು ಶೆಟ್ಟಿ ಕೊಲೆ ಸೇರಿದಂತೆ ಐದಕ್ಕೂ ಹೆಚ್ಚು ಕೊಲೆ ಕೇಸುಗಳಿದ್ದವು. ಫಣಿಯೂರು ಸಾಧು ಶೆಟ್ಟಿ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಈತ ಸಾಧು ಶೆಟ್ಟಿ ಹತ್ಯೆ ನಂತರ ತಲೆಮರೆಸಿಕೊಂಡಿದ್ದ. ಈತನನ್ನು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ನಿಗೂಢವಾಗಿದೆ.
ಇಂದು ಬೆಳಿಗ್ಗೆ ಕಂಕನಾಡಿ ರೈಲ್ವೆ ಸ್ಟೇಶನ್ ಸಮೀಪ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವುದಾಗಿ ಮಾಹಿತಿ ಬಂದಿದ್ದು, ಅಲ್ಲಿ ಪರಿಶೀಲನೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ಕುಖ್ಯಾತ ಪಾತಕಿ ಪಾಂಡುರಂಗ ಪೈ ಎಂದು ಪತ್ತೆ ಹಚ್ಚಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಡಾ.ಸುಬ್ರಮಣ್ಯ ರಾವ್ ತಿಳಿಸಿದ್ದಾರೆ. |