ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜಕೀಯ ಜಂಜಾಟದ ಜೀವನದಿಂದ ಬೇಸತ್ತ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ರಾಂತಿ ಪಡೆಯಲು ಕುಟುಂಬ ಸಮೇತರಾಗಿ ಸ್ವಿಡ್ಜ್ರ್ಲ್ಯಾಂಡ್ಗೆ ಎಂಟು ದಿವಸಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ.ಚುನಾವಣೆಯ ಫಲಿತಾಂಶ ಹೊರಬೀಳಲು ಇನ್ನೇನು ಕೆಲವೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಡಿಕೆಶಿ ಪ್ರವಾಸಕ್ಕೆ ತೆರಳಿರುವುದು ಒಂದೆಡೆ ಎಲ್ಲರ ಕುತೂಹಲ ಕೆರಳಿಸಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದಲೇ ಅಪಸ್ವರ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಏ.30.ಕ್ಕೆ ಮುಗಿದಿತ್ತು. ಇಷ್ಟರೊಳಗೆ ಪ್ರವಾಸಕ್ಕೆ ಹೋಗಿ ಬರಬಹುದಾಗಿತ್ತು. ಎಣಿಕೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಡಿಕೆಶಿ ಅವರು ಗೈರುಹಾಜರಾಗುವುದೆಂದರೆ ಏನರ್ಥ ಎಂದು ಪಕ್ಷದ ಮುಖಂಡರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. |