ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಧ್ಯಕ್ಷೆ ಹುದ್ದೆಯಿಂದ ಶ್ರುತಿ ವಜಾ ಇಲ್ಲ: ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧ್ಯಕ್ಷೆ ಹುದ್ದೆಯಿಂದ ಶ್ರುತಿ ವಜಾ ಇಲ್ಲ: ಬಿಜೆಪಿ
ನಟಿ ಶ್ರುತಿ ಹಾಗೂ ಮಹೇಂದರ್ ದಂಪತಿಗಳ ವಿಚ್ಛೇದನ ಬೆಳವಣಿಗೆ ಹಿನ್ನೆಲೆಯಲ್ಲಿ ಶ್ರುತಿ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸ್ಥಾನದಿಂದ ಕೈಬಿಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.

ಆದರೆ, ಮುಂದಿನ ಬೆಳವಣಿಗೆ ಗಮನಿಸಿ, ಅದರ ಸಂಪೂರ್ಣ ವಿವರಗಳನ್ನು ಪಡೆದುಕೊಂಡ ನಂತರ ಪಕ್ಷದ ವೇದಿಕೆಯಲ್ಲಿ ಸಹಜವಾಗಿ ಪ್ರಸ್ತಾಪವಾದರೆ ಮಾತ್ರ ನಿಗಮದ ಅಧ್ಯಕ್ಷೆ ಸ್ಥಾನದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು ತಿಳಿಸಿದರು.

ಇದು ಶ್ರುತಿ ಅವರ ವೈಯಕ್ತಿಕ ವಿಚಾರವಾಗಿದ್ದರಿಂದ ಪಕ್ಷ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ ಅವರು, ಆದರೂ ಸದುದ್ದೇಶದಿಂದ ಮಹೇಂದರ್ ಅವರನ್ನು ಕರೆದು ಮಾತನಾಡಿದ್ದೆ, ಶ್ರುತಿ ಅವರೊಂದಿಗೂ ಮಾತನಾಡಿದ್ದೆ ಆದರೆ ಶ್ರುತಿ ವಿಚ್ಛೇದನಕ್ಕೆ ಹಠ ಹಿಡಿದಿದ್ದರಿಂದ ಫಲ ನೀಡಲಿಲ್ಲ ಎಂದರು.

ಆ ನಿಟ್ಟಿನಲ್ಲಿ ಸದ್ಯಕ್ಕೆ ಶ್ರುತಿ ಅವರನ್ನು ಅಧ್ಯಕ್ಷೆ ಸ್ಥಾನದಿಂದ ವಜಾಗೊಳಿಸುವ ಪ್ರಸ್ತಾಪ ಪಕ್ಷದ ಮುಂದಿಲ್ಲ, ಇಡೀ ಪ್ರಕರಣದ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತೊಮ್ಮೆ ವಚನಭ್ರಷ್ಟತೆಗೆ ಜೆಡಿಎಸ್ ಸಿದ್ದತೆ: ಸದಾನಂದ ಗೌಡ
ಕೃಷಿ ಭೂಮಿ ಖರೀದಿಗೆ ನಿರ್ಬಂಧ ಸಡಿಲಿಕೆ: ಆಚಾರ್ಯ
ನಕ್ಸಲ್ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ವಿ.ಎಸ್.ಆಚಾರ್ಯ
ಫಲಿತಾಂಶ ಹೊರಬೀಳುವ ಮುನ್ನ ಡಿಕೆಶಿ ವಿದೇಶಕ್ಕೆ!
ಪೊಲೀಸ್ ಇಲಾಖೆ-9,431 ಹುದ್ದೆಗೆ ನೇಮಕ: ಆಚಾರ್ಯ
ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್ ಇಲ್ಲ: ಕೆ.ಜೈರಾಜ್