ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೋಡಿಶ್ರೀ 'ಜ್ಯೋತಿಷಿ ರಾಜಕಾರಣಿ': ಬಸವದಳ ಆರೋಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಡಿಶ್ರೀ 'ಜ್ಯೋತಿಷಿ ರಾಜಕಾರಣಿ': ಬಸವದಳ ಆರೋಪ
ಲಿಂಗಾಯಿತ ಧರ್ಮ ಪ್ರಚಾರವನ್ನೇ ಮರೆತಿರುವ ಕೋಡಿಮಠದ ಶ್ರೀಗಳು, ಮಠವನ್ನು ಕುಪ್ರಸಿದ್ಧ ಜ್ಯೋತಿಷ್ಯಾಲಯ ಮಾಡಲು ಹೊರಟಿದ್ದಾರೆಂದು ಬಸವದಳದ ಸಂಚಾಲಕ ವೀರೇಶ್ ಹಾಗೂ ವೀರಶೈವ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳ ಒಕ್ಕೂಟದ ಎಂ.ಆರ್.ಉಮಾಪತಿ ಆರೋಪಿಸಿದ್ದಾರೆ.

ಮಾಧ್ಯಮ ಪ್ರಚಾರ ಪ್ರಿಯತೆ, ರಾಜಕಾರಣಿಗಳ ಸಾಂಗತ್ಯದಲ್ಲಿ ಮಠವನ್ನು ಭಕ್ತರಿಂದ ಬಹುದೂರ ಕೊಂಡೊಯ್ದಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂರು ಕೊಟ್ರೆ ಮಾವನ ಕಡೆ, ಆರು ಕೊಟ್ರೆ ಅತ್ತೆ ಕಡೆ ಎಂಬ ಗಾದೆಯಂತೆ ಒಲಿಯುವ ಈ ಸ್ವಾಮೀಜಿ, ಪಕ್ಷಾಂತರ ಮಾಡುವ ರಾಜಕಾರಣಿಗಳಿಗಿಂತ ಕಡಿಮೆಯೇನಲ್ಲ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ಬಹಳ ದಿನ ಉಳಿಯಲ್ಲ, ಉಳಿದರೂ ಡಿಸೆಂಬರ್ ತನಕ ಎಂಬ ಸ್ವಾಮೀಜಿ ಅವರ ಭವಿಷ್ಯವಾಣಿ ಕೇವಲ ಪ್ರಚಾರಕ್ಕೋಸ್ಕರ ನೀಡಿದ ಹೇಳಿಕೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. ಮಠದ ಸ್ವಾಮೀಜಿ ನಿಜ ಅರ್ಥದಲ್ಲಿ ಸ್ವಾಮೀಜಿ ಅಲ್ಲ, ಕಾವಿ ಧರಿಸಿರುವ ಜ್ಯೋತಿಷಿ ರಾಜಕಾರಣಿ ಎಂಬುದು ನಾಡಿನ ಪ್ರಜ್ಞಾವಂತರಿಗೆ ತಿಳಿದಿರುವ ವಿಚಾರವೆಂದೂ ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಕಾ ಜಾರಿ: ಕಾಂಗ್ರೆಸ್ ವಿರೋಧಕ್ಕೆ ರವಿ ಆಕ್ರೋಶ
ಕುಮಾರಸ್ವಾಮಿ ದೆಹಲಿಗೆ ಹೋಗಿದ್ದೇ ಗೊತ್ತಿಲ್ಲ: ದೇವೇಗೌಡ
ಅಧ್ಯಕ್ಷೆ ಹುದ್ದೆಯಿಂದ ಶ್ರುತಿ ವಜಾ ಇಲ್ಲ: ಬಿಜೆಪಿ
ಮತ್ತೊಮ್ಮೆ ವಚನಭ್ರಷ್ಟತೆಗೆ ಜೆಡಿಎಸ್ ಸಿದ್ದತೆ: ಸದಾನಂದ ಗೌಡ
ಕೃಷಿ ಭೂಮಿ ಖರೀದಿಗೆ ನಿರ್ಬಂಧ ಸಡಿಲಿಕೆ: ಆಚಾರ್ಯ
ನಕ್ಸಲ್ ಸಮಸ್ಯೆ ನಿವಾರಣೆಗೆ ಸರ್ಕಾರ ಬದ್ಧ: ವಿ.ಎಸ್.ಆಚಾರ್ಯ