ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭೆ: ಗೆಲುವಿಗಾಗಿ ಬಿಜೆಪಿ ಮಹಾಯಾಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ: ಗೆಲುವಿಗಾಗಿ ಬಿಜೆಪಿ ಮಹಾಯಾಗ
ಲೋಕಸಭಾ ಚುನಾವಣೆಯ ಅಂತಿಮ ಮತಸಮರ ಬುಧವಾರ ಮುಕ್ತಾಯ ಕಂಡಿದ್ದು, ಫಲಿತಾಂಶಕ್ಕಾಗಿ ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಚಾರದಲ್ಲಿದ್ದಾರೆ. ಆದರೆ ಕೆಲವು ಬಿಜೆಪಿ ಅಭ್ಯರ್ಥಿಗಳು ಮಾತ್ರ ಗೆಲುವಿಗಾಗಿ ಮಹಾಯಾಗದಲ್ಲಿ ಪಾಲ್ಗೊಂಡಿದ್ದಾರೆ.

ಶಿವಮೊಗ್ಗ ನಗರದ ವಾಸವಿ ಶಾಲಾ ಆವರಣದಲ್ಲಿ ಕಳೆದ ಶುಕ್ರವಾರದಿಂದ ಆರ್ಯ-ವೈಶ್ಯ ಧರ್ಮ ಸಂರಕ್ಷಣಾ ವೇದಿಕೆ ಮಹಾಯಾಗವನ್ನು ಹಮ್ಮಿಕೊಂಡಿತ್ತು. ಬುಧವಾರ ಪೂರ್ಣಾಹುತಿಯೊಂದಿಗೆ ಮಹಾಯಾಗ ಮುಕ್ತಾಯವಾಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಹಾಗೂ ಬೆಳಗಾವಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ತಮ್ಮ ಪತ್ನಿ ಸಮೇತರಾಗಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಈ ಮಹಾಯಾಗದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೇವಲ ಮೂರು ಜನ ಬಿಜೆಪಿ ಅಭ್ಯರ್ಥಿಗಳು ಹೊರತುಪಡಿಸಿದರೆ ಬೇರಾರು ಭಾಗವಹಿಸಿರಲಿಲ್ಲವಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋಡಿಶ್ರೀ 'ಜ್ಯೋತಿಷಿ ರಾಜಕಾರಣಿ': ಬಸವದಳ ಆರೋಪ
ಕೋಕಾ ಜಾರಿ: ಕಾಂಗ್ರೆಸ್ ವಿರೋಧಕ್ಕೆ ರವಿ ಆಕ್ರೋಶ
ಕುಮಾರಸ್ವಾಮಿ ದೆಹಲಿಗೆ ಹೋಗಿದ್ದೇ ಗೊತ್ತಿಲ್ಲ: ದೇವೇಗೌಡ
ಅಧ್ಯಕ್ಷೆ ಹುದ್ದೆಯಿಂದ ಶ್ರುತಿ ವಜಾ ಇಲ್ಲ: ಬಿಜೆಪಿ
ಮತ್ತೊಮ್ಮೆ ವಚನಭ್ರಷ್ಟತೆಗೆ ಜೆಡಿಎಸ್ ಸಿದ್ದತೆ: ಸದಾನಂದ ಗೌಡ
ಕೃಷಿ ಭೂಮಿ ಖರೀದಿಗೆ ನಿರ್ಬಂಧ ಸಡಿಲಿಕೆ: ಆಚಾರ್ಯ