ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂಬಿ-ಜಗ್ಗೇಶ್ ನಡುವೆ ಸಂಧಾನಕ್ಕೆ ಕರವೇ ಪಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಬಿ-ಜಗ್ಗೇಶ್ ನಡುವೆ ಸಂಧಾನಕ್ಕೆ ಕರವೇ ಪಟ್ಟು
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಟ, ಸಂಸದ ರೆಬೆಲ್ ಸ್ಟಾರ್ ಅಂಬರೀಶ್ ಅವರ ವಿರುದ್ಧ ನವರಸ ನಾಯಕ ಜಗ್ಗೇಶ್ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಕರಣದ ಹಗ್ಗಜಗ್ಗಾಟ ಇನ್ನೂ ಮುಕ್ತಾಯ ಕಂಡಿಲ್ಲ. ಏತನ್ಮಧ್ಯೆ ಅಂಬರೀಶ್ ಹಾಗೂ ಜಗ್ಗೇಶ್ ನಡುವಿನ ಮನಸ್ತಾಪಕ್ಕೆ ಮಂಗಳ ಹಾಡಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.

ಲೋಕಸಭಾ ಚುನಾವಣೆ ವೇಳೆ ಮಾಡಿದ ರಾಜಕೀಯ ಪ್ರೇರಿತ ಭಾಷಣವನ್ನೇ ನೆಪ ಮಾಡಿಕೊಂಡು ಕೆಲವು ಶಕ್ತಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುವುದರಿಂದ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ಗಣ್ಯರು ಅಂಬರೀಶ್ ಹಾಗೂ ಜಗ್ಗೇಶ್ ನಡುವೆ ಸಂಧಾನ ನಡೆಸಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸುವಂತೆ ಮನವಿ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂಬರೀಶ್ ಹಾಗೂ ಜಗ್ಗೇಶ್ ನಡುವೆ ನಡೆದ ಮಾತಿನ ಚಕಮಕಿಯನ್ನು ಇವರ ಅಭಿಮಾನಿಗಳ ಹೆಸರಿನಲ್ಲಿ ಕೆಲ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಬರೀಶ್ ಹಾಗೂ ಜಗ್ಗೇಶ್ ನಡುವೆ ಸಂಧಾನ ನಡೆಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ ಜನಾದೇಶ-ಮಧ್ಯಾಹ್ನದೊಳಗೆ ಫಲಿತಾಂಶ: ಎಂ.ಎನ್.
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಡಿ.31 ಗಡುವು
ಭಾಷಾ ನೀತಿ-ಕನ್ನಡ ಮಾಧ್ಯಮದಲ್ಲೇ ಶಿಕ್ಷಣ: ಕಾಗೇರಿ
ಕಪ್ಪು ಹಣ ಸ್ಥಳಾಂತರಕ್ಕೆ ಡಿಕೆಶಿ ಸ್ವಿಸ್‌‌ಗೆ ಭೇಟಿ: ಸಿ.ಟಿ.ರವಿ
ಭಾಷಾ ವಿವಾದ - ಉನ್ನತ ಮಟ್ಟದ ಸಭೆ: ಕಾಗೇರಿ
ಸೋನಿಯ ಭೇಟಿ ಉದ್ದೇಶ ಬಹಿರಂಗಕ್ಕೆ ಬಿಜೆಪಿ ಆಗ್ರಹ