ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜೆಡಿಎಸ್ ಜತೆ ಸಖ್ಯಕ್ಕೆ ಎಸ್.ಎಂ.ಕೃಷ್ಣ ಸಹಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಜತೆ ಸಖ್ಯಕ್ಕೆ ಎಸ್.ಎಂ.ಕೃಷ್ಣ ಸಹಮತ
ಕಾಂಗ್ರೆಸ್ ವರಿಷ್ಠೆ ಸೋನಿಯ-ಎಸ್.ಎಂ.ಕೃಷ್ಣ ಭೇಟಿ
ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನ ರಾಷ್ಟ್ರ ರಾಜಕಾರಣದ ದೆಹಲಿಯ ಪಡಸಾಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಅದಕ್ಕೆ ಪೂರಕ ಎಂಬಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ಕೂಡ ಗುರುವಾರ ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಂದು ದೆಹಲಿಗೆ ತೆರಳಿದ್ದ ಕೃಷ್ಣ ಅವರು, ಜೆಡಿಎಸ್ ಜತೆಗಿನ ಒಪ್ಪಂದಕ್ಕೆ ತಮ್ಮ ಸಹಮತ ಇರುವುದಾಗಿ ತಿಳಿಸಿದ್ದಾರೆಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ರಾಜ್ಯರಾಜಕಾರಣದ ಕುರಿತಾಗಿ ಸೋನಿಯಗಾಂಧಿ ಅವರೊಡನೆ ಚರ್ಚಿಸಿರುವುದಾಗಿ ಹೇಳಿದ ಅವರು, ಭೇಟಿ ಉದ್ದೇಶ ಹಾಗೂ ರಹಸ್ಯ ಮಾತುಕತೆಯ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆಯಲ್ಲ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೃಷ್ಣ ಅವರನ್ನು ಪ್ರಶ್ನಿಸಿದಾಗ, ಅದರಲ್ಲಿ ತಪ್ಪೇನಿಲ್ಲ,ಜಾತ್ಯತೀತ ಶಕ್ತಿಗಳು ಒಂದಾಗಬೇಕಿದ್ದರೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು.

ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ, ಇದೀಗ ಸೋನಿಯ ಗಾಂಧಿ ಅವರು ಎಸ್.ಎಂ.ಅವರೊಂದಿಗೆ ಚರ್ಚೆ ನಡೆಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಜತೆಗೆ ಕಾಂಗ್ರೆಸ್ ಒಪ್ಪಂದ ಗಟ್ಟಿಗೊಳ್ಳುವಂತಾಗಿದೆ.

ಒಟ್ಟಾರೆ ಕರ್ನಾಟಕ ರಾಜಕೀಯ ಬೆಳವಣಿಗೆ, ಜೆಡಿಎಸ್ ಜತೆಗಿನ ಮುಂದಿನ ಸಖ್ಯ ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನಳಿದಂತೆ ಮೇ 16ರಂದು ಫಲಿತಾಂಶ ಪ್ರಕಟಗೊಂಡ ಬಳಿಕ ಮುಂದಿನ ಬೆಳವಣಿಗೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಸಚಿವ ಕಾಂಗ್ರೆಸ್‌ನ ಶ್ರೀನಿವಾಸ ಗೌಡ ಉಚ್ಛಾಟನೆ
ಅಂಬಿ-ಜಗ್ಗೇಶ್ ನಡುವೆ ಸಂಧಾನಕ್ಕೆ ಕರವೇ ಪಟ್ಟು
ಲೋಕಸಭೆ ಜನಾದೇಶ-ಮಧ್ಯಾಹ್ನದೊಳಗೆ ಫಲಿತಾಂಶ: ಎಂ.ಎನ್.
ರೇಸ್‌ಕೋರ್ಸ್ ಸ್ಥಳಾಂತರಕ್ಕೆ ಡಿ.31 ಗಡುವು
ಭಾಷಾ ನೀತಿ-ಕನ್ನಡ ಮಾಧ್ಯಮದಲ್ಲೇ ಶಿಕ್ಷಣ: ಕಾಗೇರಿ
ಕಪ್ಪು ಹಣ ಸ್ಥಳಾಂತರಕ್ಕೆ ಡಿಕೆಶಿ ಸ್ವಿಸ್‌‌ಗೆ ಭೇಟಿ: ಸಿ.ಟಿ.ರವಿ