ಕಳ್ಳರನ್ನು ಪೊಲೀಸರು ಹಿಡಿಯುವುದು ಸಾಮಾನ್ಯ. ಆದರೆ ಗ್ರಾಮಸ್ಥರು ಚಿನ್ನದ ಸರ ಅಪಹರಿಸಲು ಹೋದ ಪೊಲೀಸ್ರೊಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಕರ್ತವ್ಯ ಮುಗಿಸಿ ಮಧ್ನಾಹ್ನ ಊಟಕ್ಕಾಗಿ ಮನೆಗೆ ತೆರಳುತ್ತಿದ್ದ ಪೇದೆ ಗಂಗರಾಜು, ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಕೊರಳಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಆಕೆ ಬೊಬ್ಬೆ ಹೊಡೆದಾಗ ಸ್ಥಳೀಯರೆಲ್ಲ ಸೇರಿ ಆತನನ್ನು ಸೆರೆ ಹಿಡಿದಿದ್ದರು.
ಸೆರೆ ಹಿಡಿದ ನಂತರ ತಿಳಿಯಿತು, ಆತ ಪೊಲೀಸ್ ಪೇದೆ ಎಂದು! ನಂತರ ಗಂಗರಾಜುವನ್ನು ಕಾಮಾಕ್ಷಿಪಾಳ್ಯ ಪೊಲೀಸ ಠಾಣೆಗೆ ಒಪ್ಪಿಸಲಾಯಿತು. ಕುಡಿದ ಮತ್ತಿನಲ್ಲಿ ಆತ ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
|