ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಎಚ್‌ಡಿಕೆ, ವಿಶ್ವನಾಥ್, ಜೆ.ಶಾಂತ ಜಯಭೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಡಿಕೆ, ವಿಶ್ವನಾಥ್, ಜೆ.ಶಾಂತ ಜಯಭೇರಿ
NRB
ರಾಜ್ಯ ಲೋಕಸಭಾ ಮತಸಮರದಲ್ಲಿ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ತೇಜಸ್ವಿನಿ ವಿರುದ್ಧ ಸಮಾರು 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ದೇವೇಗೌಡ ಕುಟುಂಬದ ಬದ್ಧ ವೈರಿ ಎಂದೇ ಪರಿಗಣಿತವಾಗಿರುವ ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಕುಮಾರಸ್ವಾಮಿ ವಿರುದ್ಧ ಸೋಲನ್ನನುಭವಿಸುವ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದರೆ, ಮತ್ತೊಂದೆಡೆ ತಂದೆ, ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ ಸೇಡನ್ನು ಪುತ್ರ ಕುಮಾರಸ್ವಾಮಿ ತೀರಿಸಿಕೊಂಡಂತಾಗಿದೆ.

ಕಾಂಗ್ರೆಸ್‌‌ ತೆಕ್ಕೆಯಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸಿ.ಪಿ.ಯೋಗೇಶ್ವರ್ ಕೂಡ ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿಯಾಗಿದ್ದರು. ಈ ಫಲಿತಾಂಶದಿಂದಾಗಿ ಬಿಜೆಪಿ ಕೂಡ ಇರಿಸುಮುರಿಸಿಗೆ ಒಳಗಾಗುವಂತಾಗಿದೆ.

ರಾಜ್ಯದ 28ಕ್ಷೇತ್ರಗಳ ಮತಎಣಿಕೆ ಭರದಿಂದ ಸಾಗಿದ್ದು, ಇದೀಗ ಬಂದ ಮಾಹಿತಿಯನ್ವಯ ಮೈಸೂರಿನ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ಅವರು 7ಸಾವಿರ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿಯ ಜೆ.ಶಾಂತ ಅವರು 2ಸಾವಿರ ಮತಗಳ ಅಂತರದಿಂದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ.

ಅದೇ ರೀತಿ ಚಿತ್ರದುರ್ಗದಲ್ಲಿ ಬಿಜೆಪಿಯ ಅಭ್ಯರ್ಥಿ ಜನಾರ್ದನ ಸ್ವಾಮಿಯವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಬಿ.ತಿಪ್ಪೇಸ್ವಾಮಿ ವಿರುದ್ಧ ಸುಮಾರು 1ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರ್ತವ್ಯ ಲೋಪ: ಐಪಿಎಸ್ ಅಧಿಕಾರಿ ರವಿ ಅಮಾನತು
ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೆ ಹುನ್ನಾರ?
ಪಾಲಿಕೆಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ
ಸಾಲಬಾಧೆ: ಅಕ್ಕ-ತಂಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ
ಪೊಲೀಸ್ ಪೇದೆಯಿಂದಲೇ ಸರಗಳ್ಳತನ!