ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಸೋಲಿಲ್ಲದ ಸರದಾರ ಖರ್ಗೆ' 10ನೇ ಬಾರಿಯೂ ಗೆಲುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಸೋಲಿಲ್ಲದ ಸರದಾರ ಖರ್ಗೆ' 10ನೇ ಬಾರಿಯೂ ಗೆಲುವು
NRB
ಚಿತ್ತಾಪೂರ್ ವಿಧಾನಸಭಾ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ರೇವೂ ನಾಯಕ ಬೆಳಮಗಿ ಅವರನ್ನು ಸೋಲಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖರ್ಗೆ ಹತ್ತನೇ ಬಾರಿಯೂ ಯಶಸ್ಸಿಯಾಗಿ ಗೆಲುವು ಸಾಧಿಸುವ ಮೂಲಕ ರಾಜ್ಯ ರಾಜಕಾರಣದಿಂದ ಪ್ರಥಮ ಬಾರಿಗೆ ಸಂಸತ್‌ ಕಡೆ ಹೆಜ್ಜೆ ಹಾಕಿದ್ದಾರೆ.

67ರ ಹರೆಯದ ಕಾಂಗ್ರೆಸ್‌ನ ಹಿರಿಯ ಮುಖಂಡ ಖರ್ಗೆ, 1972ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ನಂತರ ಸತತವಾಗಿ 9ಬಾರಿ ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಗಿನ್ನೆಸ್ ದಾಖಲೆ ಬರೆದಿದ್ದರು. ಇದೀಗ ಹತ್ತನೇ ಬಾರಿ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ.

ಭಾರೀ ಜಿದ್ದಾಜಿದ್ದಿಯಿಂದ ಕೂಡಿದ್ದ ಕಲ್ಬುರ್ಗಿ ಲೋಕಸಭೆ ಕ್ಷೇತ್ರ ಕೊನೆಗೂ ಕಾಂಗ್ರೆಸ್ ಜಯಗಳಿಸುವ ಮೂಲಕ ಮತ್ತೊಮ್ಮೆ ಕಲ್ಬುರ್ಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ.

ಇದೀಗ ಖರ್ಗೆ ಗೆಲುವಿನಿಂದಾಗಿ ಚಿತ್ತಾಪೂರ್ ವಿಧಾನಸಭೆ ಕ್ಷೇತ್ರ ಮತ್ತೊಮ್ಮೆ ಚುನಾವಣೆ ಎದುರಿಸುವುದು ಅನಿವಾರ್ಯವಾಗದೆ. ಈ ಕ್ಷೇತ್ರ ವರ್ಷದಲ್ಲಿ ಮೂರನೇ ಬಾರಿ ಚುನಾವಣೆ ಎದುರಿಸುವ ಸಂದರ್ಭ ಬಂದೊದಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
3 ಶಾಸಕರು ಲೋಕಸಭೆಗೆ ಪ್ರವೇಶ
ಕಾಂಗ್ರೆಸ್ ಹೀನಾಯ ಸೋಲಿಗೆ ದೇಶಪಾಂಡೆ ನಿರಾಸೆ
ಬಿಜೆಪಿ ಗೆಲುವಿಗೆ ಸಿಎಂ ಯಡಿಯೂರಪ್ಪ ಹರ್ಷ
ಖರ್ಗೆ, ಕಟೀಲ್, ರಾಘವೇಂದ್ರ ಪ್ರಥಮ ಬಾರಿಗೆ ಸಂಸತ್ ಪ್ರವೇಶ
ರಾಜ್ಯಾದ್ಯಂತ ಬಿಜೆಪಿ ಗೆಲುವಿನ ಸಂಭ್ರಮಾಚರಣೆ
ರಾಜ್ಯರಾಜಕಾರಣದ ಸೋಲು-ಗೆಲುವಿನ ಸರದಾರರು