ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಎಂಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಕೃಷ್ಣಯ್ಯ ಶೆಟ್ಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಎಂಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಕೃಷ್ಣಯ್ಯ ಶೆಟ್ಟಿ
ಮುಖ್ಯಮಂತ್ರಿ ಯಡಿಯೂರಪ್ಪ ಏನು ಹೇಳಿದರೂ ಮಾಡಲು ಸಿದ್ಧ. ಯಾವ ತ್ಯಾಗವನ್ನು ಮಾಡುತ್ತೇನೆ. ಯಡಿಯೂರಪ್ಪ ಹೇಳಿದರೆ ವಿಷ ಬೇಕಾದರೂ ಕುಡಿಯುತ್ತೇನೆ ಎಂದು ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತೊಮ್ಮೆ ಸ್ವಾಮಿನಿಷ್ಠೆ ಹೇಳಿಕೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ಪುನರಚನೆ ಮಾಡಲು ಉದ್ದೇಶಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅದರಲ್ಲಿ ಸಂಚಕಾರ ಇದೆ ಎಂಬ ಸುಳಿವೂ ಇದ್ದುದರಿಂದ ಕೃಷ್ಣಯ್ಯ ಶೆಟ್ಟಿ ಮುಖ್ಯಮಂತ್ರಿ ಯಡಿಯೂರಪ್ಪ ಮನವೊಲಿಸಲು ಈ ವಿಷಯ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಯ್ಯ ಶೆಟ್ಟಿ ಕೋಲಾರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ದುಡಿದಿದ್ದೇನೆ. ಪಕ್ಷಕ್ಕೆ ಯಾವುದೇ ದ್ರೋಹ ಬಗೆದಿಲ್ಲ ಎಂದರು.

ಇದೇ ವೇಳೆ ಒಂದಿಬ್ಬರು ಪಕ್ಷೇತರ ಅಭ್ಯರ್ಥಿಗಳನ್ನು ಸಂಪುಟದಿಂದ ಕೈಬಿಡುವ ವದಂತಿಗಳೂ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಪಕ್ಷೇತರರು ಚುನಾವಣೆಯಲ್ಲಿ ಚೆನ್ನಾಗಿಯೇ ಕೆಲಸ ಮಾಡಿದ್ದೇವೆ. ನಮ್ಮನ್ನು ಮುಖ್ಯಮಂತ್ರಿ ಕೈಬಿಡುವುದಿಲ್ಲ. ನಮಗೆ ಅವರ ಮೇಲೆ ವಿಶ್ವಾಸ ಇದೆ ಎಂದು ಪಕ್ಷೇತರ ಸಚಿವ ಶಿವರಾಜ್ ತಂಗಡಗಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಮಾರಸ್ವಾಮಿಗೆ ಸಚಿವಗಿರಿ ಕೊಡ್ಬೇಡಿ: ಸಿದ್ದರಾಮಯ್ಯ
ಸರ್ಕಾರ ಉರುಳಿಸುವುದು ಪ್ರತಿಪಕ್ಷಗಳ ಹಗಲುಗನಸು: ಡಿ.ವಿ.
'ಪೇಯಿಂಗ್ ಗೆಸ್ಟ್ ಕಳ್ಳಿ' ಪೊಲೀಸ್ ಬಲೆಗೆ!
ಎಚ್‌ಡಿಕೆ, ಕಟೀಲ್, ಧರಂ ಸೇರಿ 9 ಕ್ರಿಮಿನಲ್‌‌ ಸಂಸದರು‍!
ಭಾಷಾ ವಿವಾದ: ಕಾಗೇರಿ ವಿರುದ್ಧ ನ್ಯಾಯಾಂಗ ನಿಂದನೆ ದೂರು
ನೆಲ-ಜಲ-ಭಾಷೆಗಾಗಿ ಹೋರಾಡುವೆ:ಬಿ.ವೈ.ರಾಘವೇಂದ್ರ