ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಿತ್ರಪ್ರದರ್ಶನ ಸಮಯ ಬದಲಾವಣೆ-ಕುಣಿತಕ್ಕೆ ಬ್ರೇಕ್: ಆಚಾರ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿತ್ರಪ್ರದರ್ಶನ ಸಮಯ ಬದಲಾವಣೆ-ಕುಣಿತಕ್ಕೆ ಬ್ರೇಕ್: ಆಚಾರ್ಯ
ರಾಜ್ಯದಲ್ಲಿ ಚಲನಚಿತ್ರ ಪ್ರದರ್ಶನದ ವೇಳೆ ಬದಲಾವಣೆಗೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಕುಡಿತ ಮತ್ತು ಕುಣಿತಕ್ಕೆ ಕಡಿವಾಣ ಹಾಕಿದೆ. ಇದರಿಂದಾಗಿ ರಾಜಧಾನಿಯಲ್ಲಿ ಮೋಜುಪ್ರಿಯರು ಇನ್ನು ಮುಂದೆ ರಾತ್ರಿ11ರವರೆಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಬಹುದಾಗಿದೆ. ಹಾಗೂ ರಾತ್ರಿ 12ರವರೆಗೆ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಉಟೋಪಚಾರ ಪೂರೈಸಿ ಹಿಂತಿರುಗಬಹುದು. ಆದರೆ ಕುಡಿತ ಮತ್ತು ಕುಣಿತಕ್ಕೆ ರಿಯಾಯಿತಿ ಇಲ್ಲ.

ಬೆಂಗಳೂರಿನಲ್ಲಿ ಚಲನಚಿತ್ರ ಪ್ರದರ್ಶನ ವೇಳೆ ಬದಲಿಸುವಂತೆ ಒತ್ತಾಯಿಸುತ್ತಿದ್ದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹು ದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ. ಪ್ರದರ್ಶದ ಹೊಸ ವೇಳೆ ಮೇ 22 ರಿಂದಲೇ ಜಾರಿಗೆ ಬರಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ವಿ.ಎಸ್ ಆಚಾರ್ಯ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹಾಗೂ ಇತರೆ ಪದಾಧಿಕಾರಿಯೊಂದಿಗೆ ಚರ್ಚಿಸಿ ಚಲನಚಿತ್ರ ಸಮಯ ಬದಲಾವಣೆ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಈ ವೇಳಾ ಪಟ್ಟಿ ನಗರದ ಎಲ್ಲಾ ಚಿತ್ರಮಂದಿರಗಳಿಗೂ ಅನ್ವಯವಾಗಲಿದೆ. ಬೆಳಗಿನ ಚಲನಚಿತ್ರ ಪ್ರದರ್ಶನ 11.15 ಕ್ಕೆ, ಮಧ್ಯಾಹ್ನ 2.30 ಕ್ಕೆ, ಸಾಯಂಕಾಲ 6.15ಕ್ಕೆ ಹಾಗೂ ರಾತ್ರಿ ಪ್ರದರ್ಶನ 8.30ಕ್ಕೆ ಆರಂಭವಾಗುತ್ತದೆ ಎಂದರು. ಒಂದು ವೇಳೆ ಸಿನಿಮಾ 3 ಗಂಟೆಗಿಂತ ಹೆಚ್ಚು ಸಮಯ ಇದ್ದಲ್ಲಿ ನಗರದ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯತಕ್ಕದ್ದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣಬಲ ಪ್ರವೃತ್ತಿ ಪ್ರಜಾಪ್ರಭುತ್ವಕ್ಕೆ ಮಾರಕ: ಜೆಡಿಎಸ್
ಬೀದರ್ ಉಪಚುನಾವಣೆ: ಮರು ಮತಎಣಿಕೆಗೆ ಬಿಜೆಪಿ ಆಗ್ರಹ
ಜೆಡಿಎಸ್ ಮೈಮೇಲೆ ಬಿದ್ದು ಬೆಂಬಲ ಕೊಡ್ತಿದೆ: ವಿಶ್ವನಾಥ್
ಎಚ್‌ಡಿಕೆ ಸಚಿವ ಸ್ಥಾನಕ್ಕೆ ಅಡ್ಡಗಾಲು ಹಾಕಿಲ್ಲ: ಸಿದ್ದರಾಮಯ್ಯ
ಲಂಚಾವತಾರ: ಸಿಂಡಿಕೇಟ್ ಸದಸ್ಯೆ ಲೋಕಾಯುಕ್ತ ಬಲೆಗೆ
ಸಿಎಂಗಾಗಿ ಯಾವ ತ್ಯಾಗಕ್ಕೂ ಸಿದ್ಧ: ಕೃಷ್ಣಯ್ಯ ಶೆಟ್ಟಿ