ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಳಗಾವಿ: ಬಸ್ ಪಲ್ಟಿ-ಇನ್ಫೋಸಿಸ್‌‌ನ ಐವರು ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ: ಬಸ್ ಪಲ್ಟಿ-ಇನ್ಫೋಸಿಸ್‌‌ನ ಐವರು ಸಾವು
ಬೆಳಗಾವಿಯ ಸಂಕೇಶ್ವರ ಸಮೀಪ ಗುರುವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿಯ ಐರಾವತ ಬಸ್ಸೊಂದು ಮಗುಚಿ ಬಿದ್ದು ಇನ್ಫೋಸಿಸ್ ಸಂಸ್ಥೆಯ ಐವರು ಮಂದಿ ಸಾವನ್ನಪ್ಪಿದ್ದು,ಎಂಟು ಮಂದಿ ಜನರಿಗೆ ಗಾಯಗಳಾಗಿವೆ. ಮೃತರನ್ನು ಮೈಸೂರು ಇನ್ಫೋಸಿಸ್ ಸಂಸ್ಥೆಯ ನೌಕರರು ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್‌ನಲ್ಲಿ ಒಟ್ಟು 43ಮಂದಿ ಪ್ರಯಾಣಿಸುತ್ತಿದ್ದರು. ಕಡಿದಾದ ತಿರುವಿನಲ್ಲಿ ಚಾಲನೆ ಮಾಡುತ್ತಿದ್ದಾಗ ಚಾಲಕನ ಹಿಡಿತ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ತಿಳಿಸಿದ್ದಾರೆ.

ಮೈಸೂರು ಇನ್ಫೋಸಿಸ್ ಸಂಸ್ಥೆಯಲ್ಲಿ ತರಬೇತಿ ಪೂರೈಸಿಕೊಂಡು ಪುಣೆಯ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೃತರು 23-25ರ ಹರೆಯದವರಾಗಿದ್ದಾರೆ. ಅವರನ್ನು ತುಷಾರ್ ಅಗರ್‌ವಾಲ್, ಅಗ್ನಿವೇಶ್(ಬಿಹಾರ), ಅಂಕಿತಾ(ದೆಹಲಿ), ರಕ್ಷಿತಾ ಮಲ್ಲೋತ್ರಾ(ನೋಯಿಡಾ) ಎಂದು ಗುರುತಿಸಲಾಗಿದೆ. ಐದನೇ ಶವವನ್ನು ಇನ್ನೂ ಗುರುತಿಸಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಪಕ್ಷ ಸ್ಥಾನ: ಸಿದ್ದುಗೆ ದೇಶಪಾಂಡೆ ಸಾಥ್
'ಲಿಫ್ಟ್‌'ನೊಳಗೆ ಸಿಕ್ಕಿಬಿದ್ದ ಸಭಾಪತಿ ವೀರಣ್ಣ!
'ಉಪಸಭಾಪತಿ' ಕನ್ನಡ ವಿರೋಧಿ ನಿಲುವಿಗೆ ಚಂದ್ರು ಕಿಡಿ
ಸರಣಿ ಸ್ಫೋಟ: ಕೋರ್ಟ್‌‌ಗೆ ಆರೋಪಪಟ್ಟಿ ಸಲ್ಲಿಕೆ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಅತಿ ಆತ್ಮವಿಶ್ವಾಸವೇ ಸೋಲಿಗೆ ಕಾರಣ: ಸಿದ್ದರಾಮಯ್ಯ