'ನನಗೆ ಇನ್ನೂ ಸರ್ಕಾರಿ ಮನೆ ನೀಡಿಲ್ಲ, ಹೊಸ ಕಾರು ಕೊಟ್ಟಿಲ್ಲ...ಇದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಅವರ ಅಳಲು.
ನನಗೆ ಹಳೆ ಕಾರು ನೀಡಲಾಗಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕರಿಗೆ ನೀಡಿರುವಂತೆ ನನಗೂ ಹೊಂಡ ಸಿಆರ್ವಿ ವಾಹನ ಬೇಕು ಎನ್ನುವುದು ಅವರ ಬೇಡಿಕೆ.
ಉದ್ದೇಶಪೂರ್ವಕವಾಗಿಯೇ ಇವೆರಡೂ ದಕ್ಕದಂತೆ ನೋಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಉಗ್ರಪ್ಪನವರದ್ದು. ನಾನು ವಿರೋಧ ಪಕ್ಷದ ನಾಯಕನಾಗಿ ವರ್ಷವಾಗುತ್ತ ಬಂತು ಆದರೂ ನನಗೆ ವಸತಿಗೃಹ ಸಿಕ್ಕಿಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ ಏನೂ ಪ್ರಯೋಜನ ಆಗಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಅಸಮಾಧಾನ ವ್ಯಕ್ತಪಡಿಸಿದರು. |