ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
PTI
'ಸಿದ್ದರಾಮಯ್ಯ ನಮ್ಮ ವೈರಿ ಅಲ್ಲ, ಅವರೇನೂ ಬೇರೆಯವರಲ್ಲ. ನಮ್ಮ ಪಕ್ಷದಲ್ಲೇ ಇದ್ದವರು. ಅವರೊಡನೆ ವೈರತ್ವದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ವೇದಾಂತದ ನುಡಿಗಳನ್ನಾಡಿದವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಎಚ್.ಡಿ.ರೇವಣ್ಣ.

ಸಿದ್ದರಾಮಯ್ಯ ಅವರೇನೂ ನಮ್ಮ ವೈರಿಗಳೂ ಅಲ್ಲ, ಅವರು ಬೇರೆಯವರೂ ಅಲ್ಲ, ನಮ್ಮ ಪಕ್ಷದಲ್ಲೇ ಇದ್ದವರು. ಇದೀಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಈ ವೈರತ್ವ ಕಟ್ಟಿಕೊಂಡು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ತಮಗೆ ಶಾಸಕಾಂಗ ಪಕ್ಷದ ಸ್ಥಾನ ಹಿಂಬಾಗಿಲಿನಿಂದ ದೊರಕಿದ್ದಲ್ಲ, ಬದಲಾಗಿ ಕೆಳಮಟ್ಟದಿಂದ ಹೋರಾಟ ನಡೆಸಿ ಬಂದ ಪರಿಶ್ರಮದಿಂದ ಈ ಹುದ್ದೆ ದೊರೆತಿದೆ ಎಂದು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಿಮ್ಮ ತಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಸಹೋದರ ಕುಮಾರಸ್ವಾಮಿ ರಾಜ್ಯಾಧ್ಯಕ್ಷರು, ಇದೀಗ ನೀವು ಶಾಸಕಾಂಗ ಪಕ್ಷದ ನಾಯಕರು. ಈ ಹುದ್ದೆಗಳನ್ನು ಗಮನಿಸಿದರೆ ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂಬುದಕ್ಕೆ ಒತ್ತು ಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ, ಇಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆ ಬರುವುದಿಲ್ಲ. ಹಾಗಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವರ ಮೇಲೆ ಆಣೆ ಮಾಡಿ ತಮ್ಮ ಪುತ್ರ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ನಂತರ ನಿಲ್ಲಿಸಿ ಗೆಲ್ಲಿಸದ್ದಾರಲ್ಲ ಎಂದು ತಿರುಗೇಟು ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನನಗೆ ಸರ್ಕಾರಿ ಮನೆ,ಹೊಸ ಕಾರು ಕೊಡಿ': ಉಗ್ರಪ್ಪ
ರೇವಣ್ಣ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಲಷ್ಕರ್ ದಾಳಿ ಬೆದರಿಕೆ: ರಾಜ್ಯದಲ್ಲೂ ಹೈ ಅಲರ್ಟ್
'ಕಟ್ಟಾ ಸಿಎಂ ಹೊಗಳು ಭಟ್ಟ': ರೇಣುಕಾಚಾರ್ಯ ಕಿಡಿ
ರೆಡ್ಡಿ ಸಹೋದರರ ಬಗ್ಗೆ ಆರೋಪ ಸಲ್ಲ: ಸಿಎಂ
ಪ್ರತಿದಿನ 25 ವಿವಾಹ ವಿಚ್ಛೇದನ ಪ್ರಕರಣ ದಾಖಲು!