ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಿನ್ನಮತ ಇಲ್ಲ;ಇದೆಲ್ಲಾ ಮಾಧ್ಯಮಗಳ ಸೃಷ್ಟಿ: ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಿನ್ನಮತ ಇಲ್ಲ;ಇದೆಲ್ಲಾ ಮಾಧ್ಯಮಗಳ ಸೃಷ್ಟಿ: ರೆಡ್ಡಿ
NRB
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದ್ದು, ನಮ್ಮಲ್ಲಿ ಭಿನ್ನಾಭಿಪ್ರಾಯವೇ ಇಲ್ಲ ಎಂದಿರುವ ಗಣಿಧಣಿ, ಸಚಿವ ಕರುಣಾಕರ ರೆಡ್ಡಿ ತೇಪೆ ಹಚ್ಚುವ ಮಾತನ್ನಾಡಿರುವ ಅವರು ಇವೆಲ್ಲವೂ ಮಾಧ್ಯಮಗಳಿಂದಲೇ ವದಂತಿ ಸೃಷ್ಠಿಯಾಗಿರುವುದಾಗಿ ಆರೋಪಿಸಿದರು.

ಮುಖ್ಯಮಂತ್ರಿಗಳೇ ನಮ್ಮ ಪ್ರಶ್ನಾತೀತ ನಾಯಕರು ಎಂದು ಹೇಳುತ್ತಿದ್ದ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕುವ ಮೂಲಕ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿತ್ತು.

ಶನಿವಾರ ಬಿಜೆಪಿಯಲ್ಲಿನ ಭಿನ್ನಮತದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಸರ್ಕಾರವನ್ನು ಅಭದ್ರಗೊಳಿಸುವ ಯೋಚನೆ ಇಲ್ಲ. ನಿನ್ನೆ ನಡೆಸಿದ ಸಭೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದ ಅವರು, ಮನ ಸಾಕ್ಷಿಯಾಗಿ ವಿರುದ್ಧವಾಗಿ ಏನೇನೊ ಕಲ್ಪಿಸಿಕೊಂಡು ವರದಿ ಮಾಡಬೇಡಿ ಎಂತಲೂ ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಸಲಹೆ ನೀಡಿದರು.

ನಂತರ ಗಣಿಧಣಿಗಳಾದ ಕರುಣಾಕರ ರೆಡ್ಡಿ, ಶ್ರೀರಾಮುಲು ಹಾಗೂ ಕೆ.ಎಸ್.ಈಶ್ವರಪ್ಪನವರನ್ನು ಪಕ್ಷದ ಅಧ್ಯಕ್ಷರಾದ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಅವರು ದೆಹಲಿಗೆ ಕರೆಯಿಸಿ ಮಾತುಕತೆ ನಡೆಸಿ ಭಿನ್ನಮತ ಶಮನಗೊಳಿಸಿದ್ದರು. ಆದರೂ ಈಶ್ವರಪ್ಪನವರು ಪುನಃ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದ್ದರು, ಕರುಣಾಕರ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ನಮ್ಮ ವೈರಿಯಲ್ಲ: ಎಚ್.ಡಿ.ರೇವಣ್ಣ
'ನನಗೆ ಸರ್ಕಾರಿ ಮನೆ,ಹೊಸ ಕಾರು ಕೊಡಿ': ಉಗ್ರಪ್ಪ
ರೇವಣ್ಣ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ಲಷ್ಕರ್ ದಾಳಿ ಬೆದರಿಕೆ: ರಾಜ್ಯದಲ್ಲೂ ಹೈ ಅಲರ್ಟ್
'ಕಟ್ಟಾ ಸಿಎಂ ಹೊಗಳು ಭಟ್ಟ': ರೇಣುಕಾಚಾರ್ಯ ಕಿಡಿ