ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರೊ.ಅ.ರಾ.ಮಿತ್ರ-ಬೀಳಗಿ ಸೇರಿ ಐವರಿಗೆ ಅಕಾಡೆಮಿ ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೊ.ಅ.ರಾ.ಮಿತ್ರ-ಬೀಳಗಿ ಸೇರಿ ಐವರಿಗೆ ಅಕಾಡೆಮಿ ಪ್ರಶಸ್ತಿ
ಪ್ರೊ.ಅ.ರಾ. ಮಿತ್ರ, ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ. ಮಲ್ಲಿಕಾರ್ಜುನಹಿರೇಮಠ ಹಾಗೂ ಲಕ್ಷ್ಮಣ ಅವರನ್ನು 2008ನೇಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಪ್ರೊ.ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರ ವಿಮರ್ಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ್ದಾರೆ. ಬೀಳಗಿಯ ಹಸನಬಿ, ವಚನಮತ್ತು ಜಾನಪದ ಸಾಹಿತ್ಯಕ್ಕೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಅಂಕೋಲಾದ ಕುಗ್ರಾಮದ ನಿರ್ಲಕ್ಷಿತ ಸಮುದಾಯದ ವಿಷ್ಣು ನಾಯ್ಕ,ನಾಟಕ, ವಿಮರ್ಶೆ, ಅಂಕಣ, ಕಥೆ, ಸಂಪಾದನೆಸೇರಿದಂತೆ 35 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

ಕೊಪ್ಪಳ ಜಿಲ್ಲೆ ಬಿಸನಳ್ಳಿಯ ಪ್ರೊ. ಮಲ್ಲಿಕಾರ್ಜುನಹಿರೇಮಠ,ಲಂಬಾಣಿ ಜನಾಂಗದ ಜೀವನಮತ್ತು ಸಂಸ್ಕೃತಿ ಕುರಿತ ಅಪರೂಪದಕಾದಂಬರಿ ‘ಹವನ’ದ ಜತೆಗೆ ಪ್ರವಾಸಕಥನ,ಕಾವ್ಯವನ್ನೂ ರಚಿಸಿದ್ದಾರೆ. ಕನಕಪುರತಾಲೂಕಿನ ಲಕ್ಷ್ಮಣ,ಕಾವ್ಯ, ಕಥೆಗಳ ಮೂಲಕಸಾಹಿತ್ಯಾಸಕ್ತರ ಗಮನಸೆಳೆದವರು. ಈಹಿನ್ನೆಲೆಯಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿಯ 2007ನೇ ಸಾಲಿನ ‘ಪುಸ್ತಕಬಹುಮಾನ’ಕ್ಕೆ 18 ಲೇಖಕರ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ ಐದುಸಾವಿರ ರೂ. ನಗದು ಬಹುಮಾನಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ ಕೊನೆ ವಾರ ಜಮಖಂಡಿಯಲ್ಲಿ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ನಿವಾಸದ ಮುಂದೆ ಧರಣಿ: ಜೆಡಿಎಸ್
'ಕೆಲವು ಮಂತ್ರಿಗಳಿಗೆ ಲಗಾಮು ಹಾಕ್ಬೇಕು: ಬೇಳೂರು
ಲೋಕಾಯುಕ್ತ ನ್ಯಾ.ಹೆಗ್ಡೆ ವಿರುದ್ಧ ಮಾನನಷ್ಟ ದಾವೆ
'ಉಸ್ತುವಾರಿ ಸಚಿವಗಿರಿಯಿಂದ ಮುಕ್ತಿಗೊಳಿಸಿ': ಶೋಭಾ
ಭಿನ್ನಮತ ಇಲ್ಲ;ಇದೆಲ್ಲಾ ಮಾಧ್ಯಮಗಳ ಸೃಷ್ಟಿ: ರೆಡ್ಡಿ
ಮಂಗಳೂರು: ಐವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ