ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಕ್ಕಟ್ಟನ್ನು ಜೇಟ್ಲಿ ಪರಿಹರಿಸುತ್ತಾರೆ: ಈಶ್ವರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಕ್ಕಟ್ಟನ್ನು ಜೇಟ್ಲಿ ಪರಿಹರಿಸುತ್ತಾರೆ: ಈಶ್ವರಪ್ಪ
ರಾಜ್ಯ ಬಿಜೆಪಿ ಪಾಳಯದಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಒಪ್ಪಿಕೊಂಡಿರುವ ಇಂಧನ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯದ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗಿನ ಆಂತರಿಕ ಭಿನ್ನಮತವೇನಿಲ್ಲ. ಆದರೆ ಪಕ್ಷದಲ್ಲಿ ಎದುರಾಗಿರುವ ಸಣ್ಣ ಪುಟ್ಟ ಗೊಂದಲಗಳಿಗೆ ಜೇಟ್ಲಿ ಅವರಿಂದ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಇದೇ ವೇಳೆ ರೆಡ್ಡಿ ಸಹೋದರರ ಕುರಿತು ಮಾತನಾಡಿದ ಅವರು, ಬಳ್ಳಾರಿ ರೆಡ್ಡಿ ಸಹೋದರರು ಯಾವುದೇ ಗಡುವು ವಿಧಿಸಿಲ್ಲ. ಒಂದು ವೇಳೆ ಹಾಗೆ ಅವರು ಹೇಳಿದ್ದರೂ ಈ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ರೆಡ್ಡಿ ಸಹೋದರರು ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಯಡಿಯೂರಪ್ಪ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರು. ಅವರ ನಾಯಕತ್ವದಲ್ಲಿ ಯಾವುದೇ ಗೊಂದಲ ಭಿನ್ನಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ಲಾಕ್‌ಮೇಲ್ ತಂತ್ರಕ್ಕೆ ಬೆಲೆ ಕೊಡ್ಬೇಡಿ: ಆರ್‌ಎಸ್‌ಎಸ್
'ಜನರಿಗಾಗಿ ಪ್ರಾಣ ಕೊಡಲು ಸಿದ್ದ': ಯಡಿಯೂರಪ್ಪ
ಪ್ರೊ.ಅ.ರಾ.ಮಿತ್ರ-ಬೀಳಗಿ ಸೇರಿ ಐವರಿಗೆ ಅಕಾಡೆಮಿ ಪ್ರಶಸ್ತಿ
ಯಡಿಯೂರಪ್ಪ ನಿವಾಸದ ಮುಂದೆ ಧರಣಿ: ಜೆಡಿಎಸ್
'ಕೆಲವು ಮಂತ್ರಿಗಳಿಗೆ ಲಗಾಮು ಹಾಕ್ಬೇಕು: ಬೇಳೂರು
ಲೋಕಾಯುಕ್ತ ನ್ಯಾ.ಹೆಗ್ಡೆ ವಿರುದ್ಧ ಮಾನನಷ್ಟ ದಾವೆ