ಮೋರಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕ ಅಭಿಷೇಕ್ ಪತ್ತೆಗಾಗಿ ಇದೀಗ ಸೇನಾ ಕಾರ್ಯಾಚರಣೆ ಮಂಗಳವಾರದಿಂದ ಆರಂಭವಾಗಿದ್ದು, ನಾಲ್ಕು ದಿನಗಳ ಕಾಲದವರೆಗೆ ಈ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಕಳೆದ ಭಾನುವಾರ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಲಿಂಗರಾಜಪುರದ ಬಳಿ ತಾಯಿಯ ಜತೆ ಹೊರ ಬಂದಿದ್ದ 6ರ ಪುಟ್ಟ ಬಾಲಕ ಅಭಿಷೇಕ್ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆತನ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಈ ಕಾರ್ಯಾಚರಣೆ ನಡೆಸಿದ್ದರು ಕೂಡ ಶವ ಪತ್ತೆಯಾಗಿಲ್ಲವಾಗಿತ್ತು.
ಅಭಿಷೇಕ್ ಶವಪತ್ತೆಗಾಗಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸರಿಯಾದ ಸಲಕರಣೆ ಕೊರತೆ ಮತ್ತು ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಅಭಿಷೇಕ್ ಮೋರಿಯಲ್ಲಿ ಕೊಚ್ಚಿ ಹೋಗಿ ಇಂದಿಗೆ ಒಂಬತ್ತು ಕಳೆದಿದೆ, ಘಟನೆ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಭಿಷೇಕ್ ಮೃತದೇಹ ಪತ್ತೆಗಾಗಿ ಸೇನೆಯನ್ನು ಕರೆಸಿದೆ. ಹೆಣ್ಣೂರು ಕೆರೆಯಿಂದ ಶೋಧ ಕಾರ್ಯಾಚರಣೆ ಆರಂಭಿಸಿರುವ ಸೇನೆ, ನಾಲ್ಕು ದಿನಗಳ ಕಾಲ ಶೋಧ ಕಾರ್ಯ ನಡೆಸಲಿದೆ.
|