ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಭಿನ್ನಮತ ಶಮನಕ್ಕೆ ಸಿಎಂ ತೆರೆಮರೆಯ ಕಸರತ್ತು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಿನ್ನಮತ ಶಮನಕ್ಕೆ ಸಿಎಂ ತೆರೆಮರೆಯ ಕಸರತ್ತು?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇಂಧನ ಸಚಿವ ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ ತೆರೆಯಮರೆಯಲ್ಲಿ ಮುಂದುವರಿದಿರುವ ನಡುವೆಯೇ ಗಣಿಧಣಿಗಳ ನಡುವಿನ ಭಿನ್ನಮತ ಶಮನಕ್ಕೆ ಸಿಎಂ ಮಂಗಳವಾರ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗಣಿಧಣಿಗಳು ಮತ್ತು ಮುಖ್ಯಮಂತ್ರಿಗಳ ನಡುವೆ ಎದ್ದಿರುವ ಭಿನ್ನಾಭಿಪ್ರಾಯವನ್ನು ದೂರ ಮಾಡುವ ನಿಟ್ಟಿನಲ್ಲಿ ಈ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೆ ಮಾತುಕತೆಯ ವಿವರಗಳು ಮಾತ್ರ ಬಹಿರಂಗ ಪಡಿಸಲಾಗಿಲ್ಲ.

ಗುಪ್ತವಾಗಿ ನಡೆಸಿದ ಮಾತುಕತೆ ನಗರದ ಹೋಟೆಲ್ಲೊಂದರಲ್ಲಿ ನಡೆದಿದಿಯೋ ಅಥವಾ ಗಣ್ಯವ್ಯಕ್ತಿಯೊಬ್ಬರ ನಿವಾಸದಲ್ಲಿ ನಡೆದಿದಿಯೋ ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ಮಾತುಕತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಬಿಟ್ಟರೆ ಮತ್ಯಾರು ಉಪಸ್ಥಿತಿ ಇರಲಿಲ್ಲ. ಮುಖ್ಯಮಂತ್ರಿಗಳು ಮತ್ತು ಗಣಿಧಣಿಗಳು ತಮ್ಮ ಖಾಸಗಿ ಕಾರಿನಲ್ಲೇ ಮಾತುಕತೆಗೆ ಆಗಮಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಮಾತುಕತೆ ಮೂಲಕ ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಹಾಗೂ ಗಣಿಧಣಿಗಳ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯ ಶಮನವಾಗುವ ಲಕ್ಷಣಗಳು ಕಾಣುತ್ತಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿ ಸಮೀಕ್ಷೆಗೆ ಮತ್ತೆ ನಾಲ್ಕು ವಾರ ಗಡುವು
ರೆವಿನ್ಯೂ ಅಧಿಕಾರಿಗಳ ಮೇಲೆ ಹದ್ದಿನಕಣ್ಣು...
ಇಂಥ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ: ಜೆಡಿಎಸ್
ಗೋಲಿಬಾರ್ ವಿಚಾರಣೆ: ಆಯೋಗದ ವಕೀಲರಿಂದ ಬೆದರಿಕೆ!
ಬಂಡಾಯದ ಬಿಸಿಗೆ 'ಸೊಪ್ಪು' ಹಾಕದ ಯಡಿಯೂರಪ್ಪ!
'ನಾನು ಐಷಾರಾಮಿ ಕಾರು ಕೇಳಿಲ್ಲ': ವಿ.ಎಸ್.ಉಗ್ರಪ್ಪ