ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಮೂರ್ತಿ
ರಾಜರ ಆಳ್ವಿಕೆ ಕಾಲದಲ್ಲಿ ಮಹಾರಾಷ್ಟ್ರದಲ್ಲೂ ಕನ್ನಡ ಸಂಸ್ಕೃತಿಯನ್ನು ಕಾಣಬಹುದಿತ್ತು. ಹಾಗಾಗಿ ಬೆಳಗಾವಿ ಕರ್ನಾಟಕದ ಒಂದು ಅವಿಭಾಜ್ಯ ಅಂಗ ಎಂಬುದರಲ್ಲಿ ಸಂಶಯವಿಲ್ಲ. ಈ ಎರಡೂ ರಾಜ್ಯಗಳ ನಡುವಿನ ಗಡಿ ತಕರಾರಿಗೆ ಮಹಾಜನ ವರದಿಯೇ ಅಂತಿಮವಾದದ್ದು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿದರು.

ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ಕಾರ್ಮಿಕಲೋಕ ಸಂಘಟನೆಯು ಕನ್ನಡ ಬೆರಳಚ್ಚು ಯಂತ್ರ ರೂಪಿಸಿದ ಕೆ.ಅನಂತಸುಬ್ಬರಾವ್ ಹಾಗೂ ಹೋರಾಟಗಾರ ಅರವಿಂದ ಜೋಷಿ ಅವರ ಶತಮಾನೋತ್ಸವ ಸಮಾರಂಭದ ಅಂಗವಾಗಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜರ ಆಳ್ವಿಕೆ ಕಾಲದಿಂದಲೂ ಮಹಾರಾಷ್ಟ್ರದಲ್ಲಿ ಕನ್ನಡ ಸಂಸ್ಕೃತಿ ಬೇರುಬಿಟ್ಟಿತ್ತು. ಈ ಎರಡೂ ರಾಜ್ಯಗಳ ನಡುವಿನ ಗಡಿತಂಟೆ ಸಮಸ್ಯೆಗೆ ಮಹಾಜನ ವರದಿಯೇ ಮದ್ದು ಎಂದ ಅವರು, ಯಾವ ಕಾರಣಕ್ಕೂ ಘರ್ಷಣೆ ಉಂಟಾಗಬಾರದು ಎಂದರು.

ಆ ನಿಟ್ಟಿನಲ್ಲಿ ಅರವಿಂದ ಜೋಷಿ ಅವರಂತಹ ಹೋರಾಟಗಾರರಿಂದ ಗಡಿ ನಾಡಲ್ಲೂ ಕನ್ನಡ ಮೊಳಗುವಂತಾಗಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಿನ್ನಮತ ಶಮನಕ್ಕೆ ಸಿಎಂ ತೆರೆಮರೆಯ ಕಸರತ್ತು?
ಗಣಿ ಸಮೀಕ್ಷೆಗೆ ಮತ್ತೆ ನಾಲ್ಕು ವಾರ ಗಡುವು
ರೆವಿನ್ಯೂ ಅಧಿಕಾರಿಗಳ ಮೇಲೆ ಹದ್ದಿನಕಣ್ಣು...
ಇಂಥ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ: ಜೆಡಿಎಸ್
ಗೋಲಿಬಾರ್ ವಿಚಾರಣೆ: ಆಯೋಗದ ವಕೀಲರಿಂದ ಬೆದರಿಕೆ!
ಬಂಡಾಯದ ಬಿಸಿಗೆ 'ಸೊಪ್ಪು' ಹಾಕದ ಯಡಿಯೂರಪ್ಪ!