ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾರ್ಕಳ ನಿವಾಸಿಗೆ ಎಚ್‌1ಎನ್‌1 ಸೋಂಕು ಶಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರ್ಕಳ ನಿವಾಸಿಗೆ ಎಚ್‌1ಎನ್‌1 ಸೋಂಕು ಶಂಕೆ
ಈಜಿಪ್ಟ್‌ನ ಕೈರೋದಿಂದ ಮಂಗಳೂರಿಗೆ ಆಗಮಿಸಿದ್ದ ಕಾರ್ಕಳ ನಿವಾಸಿಯೊಬ್ಬರಲ್ಲಿ ಎಚ್‌1ಎನ್‌1 ಸೋಂಕು ಶಂಕೆ ಇರುವುದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ರಜೆಯ ನಿಮಿತ್ತ ಕೈರೋದಿಂದ ಆಗಮಿಸಿದ್ದ ಕಾರ್ಕಳ ನಿವಾಸಿ ವಿಶ್ವನಾಥ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿದಾಗ ಸೋಂಕು ಇರುವುದಾಗಿ ಪತ್ತೆಯಾಗಿದ್ದು, ಇದೀಗ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಚ್‌1ಎನ್‌1 ಸೋಂಕಿನ ಪತ್ತೆ ಖಚಿತಪಡಿಸುವ ಸಲುವಾಗಿ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಜಾಗತಿಕವಾಗಿ ಭೀತಿ ಮೂಡಿಸಿರುವ ಹಂದಿಜ್ವರ (ಎಚ್‌1ಎನ್‌1) ಭಾರತದಲ್ಲಿಯೂ ಕಾಣಿಸಿಕೊಳ್ಳತೊಡಗಿದೆ. ಮಂಗಳವಾರವಷ್ಟೇ ಇಬ್ಬರಿಗೆ ಎಚ್‌1ಎನ್‌1 ಸೋಂಕು ಇರುವುದು ಪತ್ತೆಯಾಗಿತ್ತು. ಹಂದಿಜ್ವರ ಸೋಂಕು ತಡೆಗಾಗಿ ದೇಶಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಅಜಾದ್ ತಿಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೇಟ್ಲಿ ಸಾರಥ್ಯದಲ್ಲಿ ಬಂಡಾಯ ಶಮನಕ್ಕೆ ಯತ್ನ?
ಮೈಸೂರು: ಸ್ಟಾಫ್‌ರೂಂನಲ್ಲೇ ಪ್ರೊಫೆಸರ್ ಹತ್ಯೆ
ಶೀಘ್ರವೇ ಮುಖ್ಯಮಂತ್ರಿ 'ಜನತಾ ದರ್ಶನ'
ಭಿನ್ನಮತ: ಮುಖ್ಯಮಂತ್ರಿಗೆ 'ಗಣಿಧಣಿಗಳ' ಗಡುವು !
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಮೂರ್ತಿ
ಭಿನ್ನಮತ ಶಮನಕ್ಕೆ ಸಿಎಂ ತೆರೆಮರೆಯ ಕಸರತ್ತು?