ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಮತ್ತು ಆತನ ನಿಕಟವರ್ತಿ ಮೊಹಮ್ಮದ್ ಒಮರ್ ಮದನಿ ಅವರಿಬ್ಬರೂ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ಮಾಡಿದರೆನ್ನಲಾಗಿದೆ.
ಬಂಧನದಲ್ಲಿರುವ ಮದನಿ ತನಿಖೆಯ ವೇಳೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಬಾಯ್ಬಿಟ್ಟಿರುವುದಾಗಿ ಜಾಗೃತದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ಬೆಂಗಳೂರಿನ ಭಾರತೀಯ ವಿಜ್ಞಾನ ಭವನ ಸಂಸ್ಥೆ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿರುವ ಶಹಾಬುದ್ದೀನ್ ಎಂಬುವನು 2002ರಲ್ಲಿ ಮುಜಾಫರ್ ನಗರದಲ್ಲಿ ನಡೆದ ಲಷ್ಕರ್ ಎ ತೊಯ್ಬಾ ತರಬೇತಿ ಶಿಬಿರದ ಉಸ್ತುವಾರಿ ವಹಿಸಿಕೊಂಡಿದ್ದ ಎಂದು ಬಾಯಿ ಬಿಟ್ಟಿದ್ದಾನೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಎಲ್‌ಇಟಿಯ ಭಯೋತ್ಪಾದಕ ಯೋಜನೆಗಳನ್ನು ಸಯೀದ್, ಮದನಿ, ಶಹಾಬುದ್ದೀನ್ ಹಾಗೂ ಸರ್ಫರಾಜ್ ನವಾಜ್ ಎಲ್ಲೆಲ್ಲಿ ಹಾಗೂ ಯಾವ ರೀತಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದನ್ನು ತನಿಖೆಯಿಂದ ಮತ್ತಷ್ಟು ವಿವರ ಪಡೆಯುವ ಪ್ರಯತ್ನ ಪೊಲೀಸ್ ಅಧಿಕಾರಿಗಳದ್ದು. |