ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಬಿಎಂಪಿ ಆಡಳಿತಾಧಿಕಾರಿ ಮನೆಗೆ ಸಿಬಿಐ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಬಿಎಂಪಿ ಆಡಳಿತಾಧಿಕಾರಿ ಮನೆಗೆ ಸಿಬಿಐ ದಾಳಿ
ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿಯೂ ಆಗಿರುವ ದಿಲೀಪ್ ರಾವ್ ಅವರ ಮನೆ ಮೇಲೆ ಬುಧವಾರ ಸಂಜೆ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದೇ ರೀತಿ ದೇಶದ ಇನ್ನಿತರ ಭಾಗಗಳಲ್ಲಿಯೂ ಸಿಬಿಐ ಅಧಿಕಾರಿಗಳು ನಡೆಸಿರುವ ದಾಳಿಯಲ್ಲಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ದೂರದರ್ಶನ ಇಲಾಖೆ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.

ದಿಲೀಪ್ ರಾವ್ ಕಳೆದ ಬುಧವಾರವೇ ಪ್ರವಾಸಕ್ಕೆಂದು ಪತ್ನಿ ಸಮೇತ ಬೋಸ್ಟ್‌ನ್‌ಗೆ ತೆರಳಿದ್ದರು. ಈ ವೇಳೆಯೇ ಸಿಬಿಐ ಅಧಿಕಾರಿಗಳು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿನ ಮನೆಯನ್ನು ವಶಕ್ಕೆ ತೆಗೆದುಕೊಂಡಿದ್ದು ಅದಕ್ಕೆ ಬೀಗಮುದ್ರೆ ಹಾಕಿದ್ದಾರೆ.

ಜೂ.18ರಂದು ದಿಲೀಪ್ ರಾವ್ ನಗರಕ್ಕೆ ಹಿಂತಿರುಗುವ ಸಾಧ್ಯತೆ ಇದೆ, ಆ ಬಳಿಕವೇ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಯಲಿದೆ. ದಿಲೀಪ್ ರಾವ್ ಬಿಬಿಎಂಪಿ ಆಡಳಿತಾಧಿಕಾರಿಯಾಗಿದ್ದು, ಪತ್ನಿ ಮಂಜುಳಾ ರಾವ್ ನಿಮಾನ್ಸ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆ.

ಬುಧವಾರ ಸಂಜೆ ಮಹಿಳಾ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ದಾಳಿ ನಡೆದಿದೆ. ಮನೆ ಬಳಿ ಹೋದಾಗ ಕಾವಲುಗಾರ ಇದಕ್ಕೆ ತಡೆಯೊಡ್ಡಿದ್ದು, ಇದೇ ವಿಚಾರಕ್ಕೆ ಕಾವಲುಗಾರ ಮತ್ತು ಸಿಬಿಐ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಳ್ಳಾರಿ ಅಕ್ರಮ ಗಣಿಗಾರಿಕೆ ಮುಚ್ಚಿಸುವೆ: ಜೈರಾಮ್
ಲಿಂಗಾಯಿತ ಹಿಂದುಳಿದ ವರ್ಗವಲ್ಲ: ಆಯೋಗ
ರಾಜ್ಯಕ್ಕೆ ಕೇಂದ್ರದಿಂದ ಆರ್ಥಿಕ ನೆರವು
ನ್ಯಾಯಬೆಲೆ ಅಂಗಡಿ-ಮೋಸ ಮಾಡಿದ್ರೆ ಜಾಗ್ರತೆ: ಸಿಎಂ
ಸಿಎಂಗೆ ಗಡುವು ವಿಧಿಸುವುದು ಸರಿಯಲ್ಲ: ಧನಂಜಯ್
ಸಿಲಿಕಾನ್ ಸಿಟಿ ಸ್ಫೋಟಕ್ಕೂ ಸಯೀದ್ ಸಂಚು!