ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಒಬ್ಬ ಬಾಲಕ ಸೇರಿ 15 ಮಂದಿಯನ್ನು ಬಂಧನದಲ್ಲಿಟ್ಟಿದ್ದನ್ನು ತಿಳಿದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಮತ್ತು ಐಜಿಪಿ ಬಿಪಿನ್ ಗೋಪಾಲಕೃಷ್ಣ ಹಠಾತ್ ಭೇಟಿ ಮಾಡಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಕಾನೂನು, ಸಂವಿಧಾನಕ್ಕೆ ನಿಮ್ಮ ಮುಂದೆ ಬೆಲೆಯೇ ಇಲ್ಲವೇ. ಅಪರಾಧದ ಹೆಸರಿನಲ್ಲಿ ತಿಂಗಳುಗಟ್ಟಲೆ ಅಕ್ರಮವಾಗಿ ನಾಗರಿಕರನ್ನು ಹೀಗೆ ಸೆರೆಯಲ್ಲಿಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಠಾಣೆಯ ಅಧಿಕಾರಿಗಳಿಗೆ ಮಾನವ ಹಕ್ಕುಗಳ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್. ನಾಯಕ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಲಕನೊಬ್ಬನನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ ಎಂಬ ದೂರು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು ಠಾಣೆಯಲ್ಲಿ ಬಂದು ನೋಡಿದ ನಂತರ ಅಕ್ರಮವಾಗಿ ಬಂಧನದಲ್ಲಿದವರು 15 ಮಂದಿ. ಇದನ್ನು ಕಂಡ ಆಯೋಗದ ಅಧ್ಯಕ್ಷರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಧನದಲ್ಲಿರುವವರನ್ನು ಆದಷ್ಟು ಬೇಗ ಬಿಟ್ಟುಬಿಡಲು ಅಥವಾ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಅನೇಕ ಠಾಣೆಗಳಲ್ಲಿ ಇಂತಹ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿವೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್. ಆರ್. ನಾಯಕ್ ಹೇಳಿದ್ದಾರೆ.
|