ವಿಧಾನಮಂಡಲದ ಮಳೆಗಾಲದ ಅಧಿವೇಶನ ಜುಲೈ 9ರಿಂದ 24ರವರೆಗೆ ನಡೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ವಿ.ಎಸ್.ಆಚಾರ್ಯ ಅವರು, 15ದಿನಗಳ ಕಾಲ ಅಧಿವೇಶನ ನಡೆಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಗಿದ್ದು, ಅಗತ್ಯವಿದ್ದರೆ ಒಂದೆರಡು ದಿನ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 18ವಿಧೇಯಕಗಳ ಪರಿಗಣನೆ ಹಾಗೂ ಅಂಗೀಕಾರ ಪಡೆಯಲಾಗುವುದು. ಪೂರ್ಣ ವರ್ಷದ ಬಜೆಟ್‌ಗೆ ಅನುಮೋದನೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.
ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸುವ ಸಲುವಾಗಿ ಕರ್ನಾಟಕ ಸಹಕಾರ ಮಹಾಮಂಡಲದವರು ಎಸ್‌ಬಿಎಂನಿಂದ ಪಡೆದಿದ್ದ 400ಕೋಟಿ ರೂ.ಸಾಲ ಹಾಗೂ ಬಡ್ಡಿ ಪಾವತಿಗೆ ಸರ್ಕಾರದ ಖಾತರಿಯನ್ನು ಸೆಪ್ಟೆಂಬರ್ 30ರತನಕ ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು. |