ಜಾಗತಿಕವಾಗಿ ಜನರನ್ನು ಭೀತಿಯತ್ತ ದೂಡಿರುವ ಹಂದಿಜ್ವರ ಎಲ್ಲೆಡೆ ಕಾಣಿಸಿಕೊಳ್ಳತೊಡಗಿರುವ ಬೆನ್ನಲ್ಲೇ ಉದ್ಯಾನಗರಿಯಲ್ಲಿ ನಾಲ್ಕು ಮಂದಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಚ್1ಎನ್1 ಶಂಕಿತ ರೋಗಿಗಳು ಪತ್ತೆಯಾಗಿದ್ದು ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಶನಲ್ ಇನಿಸ್ಟಿಟ್ಯೂಟ್ ಆಫ್ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ.
ಸಾಫ್ಟ್‌ವೇರ್ ದಂಪತಿ ಸೇರಿದಂತೆ ತಾಯಿ, ಮಗಳಿಗೆ ಎಚ್1ಎನ್1 ಸೋಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಸಾಫ್ಟ್‌ವೇರ್ ದಂಪತಿಗಳು ನ್ಯೂಜೆರ್ಸಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ರೋಗದ ಲಕ್ಷಣಗಳು ಪತ್ತೆಯಾಗಿವೆ. ಶಂಕಿತರನ್ನು ರಾಜೀವ್ ಗಾಂಧಿ ಚೆಸ್ಟ್ ಡಿಸೀಸಸ್ ಸಂಸ್ಥೆಗೆ ದಾಖಲಿಸಲಾಗಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲೂ ಒಂದೇ ಕುಟುಂಬದ ಐವರಿಗೆ ಎಚ್1ಎನ್1 ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ. ಒಂದೇ ಕುಟುಂಬಕ್ಕೆ ಸೇರಿದ ಇವರು ಇಲ್ಲಿನ ಮೀನಬಾಕಂ ವಿಮಾನ ನಿಲ್ದಾಣಕ್ಕೆ ಅಮೆರಿಕದಿಂದ ಬಂದಿದ್ದರು. |