ಲೋಕಾಯುಕ್ತ ಸಂತೋಷ್ ಹೆಗಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ಮುಜುಗರಕ್ಕೆ ಈಡು ಮಾಡಿದ ಬಿಬಿಎಂಪಿ ಆಯುಕ್ತ ಡಾ. ಸುಬ್ರಮಣ್ಯ ಅವರನ್ನು ಕೃಷಿ ಆಯುಕ್ತರಾಗಿ ವರ್ಗಾವಣೆ ಮಾಡಿ, ಬಿಬಿಎಂಪಿಗೆ ಭರತ್ ಲಾಲ್ ಮೀನಾ ಅವರನ್ನು ಸರ್ಕಾರ ನೂತನವಾಗಿ ಆಯ್ಕೆ ಮಾಡಿದೆ.
ಆಯುಕ್ತ ಸುಬ್ರಮಣ್ಯ ಅವರನ್ನು ವರ್ಗವಣೆ ಮಾಡಲು ಮುಖ್ಯಮಂತ್ರಿಯವರ ಅಂಕಿತ ಕೂಡ ಬಿದ್ದಿದೆ. ಬಿಬಿಎಂಪಿ ಆಯುಕ್ತ ಸುಬ್ರಮಣ್ಯ ಅವರ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿರುವ ಭರತ್‌ಲಾಲ್ ಮೀನಾ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು, ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಬಿಬಿಎಂಪಿ ಸ್ಥಾನದಿಂದ ಆಯುಕ್ತ ಸುಬ್ರಮಣ್ಯ ಅವರನ್ನು ವರ್ಗಾವಣೆ ಮಾಡಲು ಕಳೆದ ವಾರ ಸುರಿದ ಬಾರಿ ಮಳೆಯ ಪರಿಣಾಮ ಮೋರಿಯಲ್ಲಿ ಕೊಚ್ಚಿ ಹೋದ ಆಭಿಷೇಕನ ದೇಹ ಶೋಧದಲ್ಲಿ ಸರಿಯಾದ ಕ್ರಮಕೈಗೊಳ್ಳದೆ ನಿರ್ಲಕ್ಷ ತೋರಿರುವುದು ಒಂದು ಕಾರಣವಾದರೆ, ಸರ್ಕಾರದ ಅನುಮತಿ ಇಲ್ಲದೆ ಲೋಕಾಯುಕ್ತರ ವಿರುದ್ದ ಮಾನನಷ್ಟ ಮೊಕದ್ದಮ್ಮೆ ಹೂಡಿರುವುದು ವರ್ಗಾವಣೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಮಧ್ಯೆ ಕೆಲ ಬಿಜೆಪಿ ಶಾಸಕರು ಮತ್ತು ಕಾಂಗ್ರೆಸ್ ಶಾಸಕರು ಬಿಬಿಎಂಪಿ ಆಯುಕ್ತ ಡಾ.ಸುಬ್ರಮಣ್ಯ ಅವರ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. |