ಕೈಗಾ ಅಣುಶಕ್ತಿ ಸ್ಥಾವರದ ಮೆಕಾನಿಕಲ್ ವಿಭಾಗದ ಸೈಂಟಿಫಿಕ್ ಆಫೀಸರ್ ಎಲ್.ಮಹಾಲಿಂಗಂ ನಿಗೂಢವಾಗಿ ಕಣ್ಮರೆಯಾಗಿ ಆರನೇ ದಿನವಾದ ಶನಿವಾರ ಬೆಳಿಗ್ಗೆ ಕಾಳಿ ನದಿಯಲ್ಲಿ ಶೋಧ ಕಾರ್ಯವನ್ನು ಮುಂದುರಿಸಲಾಗಿದೆ.
ಹೃದಯ ಖಾಯಿಲೆ ಹೊಂದಿದ್ದ ಲೋಕನಾಥ ಮಹಾಲಿಂಗಂ ಕೈಗಾ ಟೌನ್‌ಶಿಫ್‌ನ ಸಮೀಪದಲ್ಲಿ ಹರಿಯುವ ಕಾಳಿ ನದಿಯಲ್ಲಿ ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ತೇಲಿಹೋಗಿರಬಹುದು ಎಂಬ ಶಂಕೆಯ ಮೇರೆಗೆ ಕೂಂಬಿಂಗ್ ನಡೆಸಲಾಗುತ್ತಿದೆ.
ಶನಿವಾರ ನಸುಕಿನಿಂದಲೇ ಮತ್ತೆ ವಿಶೇಷವಾಗಿ ಹೆಚ್ಚಿನ ಮುತುವರ್ಜಿಯಿಂದ ಶೋಧ ಕಾರ್ಯದಲ್ಲಿ ತೊಡಗಿರುವ ಸ್ಥಳೀಯ ಜಿಲ್ಲಾ ಪೊಲೀಸ್ ಇಲಾಖೆ, ಸಿಐಎಸ್‌ಎಫ್ ಹಾಗೂ ಅರಣ್ಯ ಇಲಾಖೆಯೊಂದಿಗೆ ಸೇರಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕೈಗಾ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಜಾಲಾಡತೊಡಗಿದ್ದಾರೆ.
ಅಲ್ಲದೇ ಕೈಗಾ ಟೌನ್‌ಶಿಫ್ ವ್ಯಾಪ್ತಿಯ ಕಾಳಿನದಿಯ ಆಳವನ್ನು ಶೋಧಿಸಲು ಮುಂಬೈ ಮತ್ತು ಗೋವಾದಿಂದ ವಿಶೇಷ ಮುಳುಗು ಪರಿಣತರು ಆಗಮಿಸಿದ್ದಾರೆ. |