ನೂತನ ಬಿಬಿಎಂಪಿ ಆಯುಕ್ತರಾಗಿ ಆಯ್ಕೆಯಾಗಿರುವ ಭರತ್ ಲಾಲ್ ಮೀನಾ ಮೊದಲಿಗೆ ಬಿಬಿಎಂಪಿ ಆಡಳಿತ ವ್ಯವಸ್ಥೆಯ ರಿಪೇರಿಗೆ ಆದ್ಯತೆ ನೀಡಲು ಯೋಜಿಸಿದ್ದಾರೆ.
ಮಳೆಗಾಲ ಆರಂಭವಾದ ಹಿನ್ನೆಲೆಯಲ್ಲಿ ಅಪಘಡಗಳನ್ನು ತಪ್ಪಿಸಲು ಮಳೆ ನೀರು ಮೋರಿಯ ಸ್ವಚ್ಛತೆ ಹಾಗೂ ಒಳಚರಂಡಿ ಜಾಲ ದುರಸ್ತಿ ಮಾಡಬೇಕು. ಇದಕ್ಕೆ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳ ನಿವಾರಣೆಗೆ, ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಯೋಜನೆ ರೂಪಿಸಲು ಮೊದಲು ಬಿಬಿಎಂಪಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಬಳಿಕ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಪಾರದರ್ಶಕತೆ ಮದ್ದು. ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುವೆ. ಬಿಬಿಎಂಪಿ ಆಡಳಿತದಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಪರಿಹಾರ ಕಂಡುಕೊಂಡು ಮುನ್ನಡೆಯುವೆ ಎಂದು ಅವರು ಹೇಳಿದ್ದಾರೆ. |