ಪಕ್ಷದಲ್ಲಿ ದ್ವೇಶ, ಭಿನ್ನಾಭಿಪ್ರಾಯ ತೊರೆದು ರಾಜ್ಯದ ಅಭಿವೃದ್ದಿ ಮಂತ್ರ ಜಪಿಸೋಣ ಎಂದು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎದ್ದಿದ್ದ ಅಸಮಾಧಾನ ದೂರವಾಗಿದ್ದು, ಇನ್ನು ಮುಂದೆ ರಾಜ್ಯದ ಅಭಿವೃದ್ದಿಗೆ ಒಗ್ಗಟ್ಟಿನಿಂದ ದುಡಿಯಲು ನಿರ್ಧರಿಸಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯ ಬಂದರೂ ಅದನ್ನು ಪಕ್ಷದಲ್ಲಿಯೇ ಚರ್ಚಿಸಿ ಬಗೆಹರಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಇನ್ನೇನಿದ್ದರು ರಾಜ್ಯದ ಅಭಿವೃದ್ಧಿಯೊಂದೇ ನಮ್ಮೆಲ್ಲರ ಗುರಿ ಎಂದು ತಿಳಿಸಿದರು.
ರೆಡ್ಡಿ ಸಹೋದರರು ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡದೆ ಇರುವುದು, ಸಂಪುಟ ಸಭೆಗೆ ಹಾಜರಾಗದೆ ಇರುವುದಕ್ಕೂ ಯಾವುದೇ ಅರ್ಥ ಕಲ್ಪಿಸುವುದು ಬೇಡ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಹಾಗೇನಾದರು ಇದ್ದರೆ ಅದನ್ನು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ ಎಂದರು. |