ಹಳೆ ದ್ವೇಷಕ್ಕೆ ಸಂಬಂಧಿಸಿದಂತೆ 60 ವರ್ಷದ ವೃದ್ಧೆಯೊಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡಬೀಸನ ಹಳ್ಳಿಯ ಮುನಿಯಮ್ಮ(65) ಎಂಬ ಮಹಿಳೆಯನ್ನು ಅಪಹರಿಸಿರುವ ಆರೋಪದಲ್ಲಿ ಮಂಜುನಾಥ್(30), ಚಂದ್ರು(21), ಮುನಿರಾಜು(24), ಶ್ರೀನಿವಾಸ(24) ಹಾಗೂ ಗೋವಿಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಕಾರು, ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುನಿಯಮ್ಮ ಅವರ ಪುತ್ರ ವೆಂಕಟಸ್ವಾಮಿ(38) ಎಂಬವರು ನೀಡಿರುವ ದೂರಿನ ಆಧಾರದಲ್ಲಿ ತಕ್ಷಣ ಕಾರ್ಯಾಚರಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ ಭೂವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜೋಡಿ ಕೊಲೆಗೆ ನಡೆದಿತ್ತು. ಇದರಿಂದಾಗಿ ಕಾಡಬೀಸನಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರ ಪ್ರದೇಶಗಳಿಗೆ ದ್ವೇಷ ಮುಂದುವರೆದಿತ್ತು. ಕರಿಯಮ್ಮನ ಅಗ್ರಹಾರದ ಕೆಲ ರೌಡಿಗಳು ಕಾಡಬಿಸನಹಳ್ಳಿ ಜನರಿಗೆ ಪದೆಪದೇ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಭಾನುವಾರ ರಾತ್ರಿ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ಈ ಐವರ ತಂಡ ಮುನಿಯಮ್ಮರನ್ನು ಕಾಡಬಿಸನಹಳ್ಳಿಯ ಮನೆಯೊಂದರಿಂದ ಅಪಹರಿಸಿ, ದೂರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಗೆ ದೈಹಿಕ ಹಿಂಸೆ ನೀಡಿದ ಬಳಿಕ ನಿರ್ಜನ ಪ್ರದೇಶದಲ್ಲಿ ಬಿಟ್ಟು ತೆರಳಿದ್ದರು.
ರಾತ್ರಿಯಿಡೀ ಒದ್ದಾಡುತ್ತಾ ಕಾಲಕಳೆದ ಮಹಿಳೆ ಬೆಳಿಗ್ಗೆ ಅಟೋವೊಂದರಲ್ಲಿ ತೆರಳಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. |