ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಟೇಲ್‌ಗಳಿಗೆ ಮಕ್ಕಳ ಮಾರಾಟ ನಡೆಯುತ್ತಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಟೇಲ್‌ಗಳಿಗೆ ಮಕ್ಕಳ ಮಾರಾಟ ನಡೆಯುತ್ತಿಲ್ಲ
ಮನೆಬಿಟ್ಟು ನಗರಕ್ಕೆ ಓಡಿ ಬಂದ ಗ್ರಾಮೀಣ ಪ್ರದೇಶದ ಮಕ್ಕಳನ್ನು ಹೊಟೇಲು ಕೆಲಸಕ್ಕಾಗಿ ಯಾರೂ ಖರೀದಿಸುತ್ತಿಲ್ಲ ಹಾಗೂ ಹೊಟೇಲುಗಳಿಗೆ ಯಾರೂ ಇಂತವರನ್ನು ಮಾರಾಟ ಮಾಡುತ್ತಿಲ್ಲ ಎಂದು ಬೃಹತ್ ಬೆಂಗಳೂರು ಹೊಟೇಲುಗಳ ಸಂಘದ ಅಧ್ಯಕ್ಷ ಕೆ.ಎನ್. ವಾಸುದೇವ ಅಡಿಗ ಸ್ಪಷ್ಟಪಡಿಸಿದ್ದಾರೆ. ಉದ್ಯಮದ ಬಗ್ಗೆ ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಖಾಸಗಿ, ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯ ನಿರ್ವಹಿಸುವ ಲಕ್ಷಾಂತರ ಮಂದಿ, ಮ್ಯಾನ್ಪವರ್ ಕನ್ಸಲ್‌ಟೆನ್ಸಿ ಸಂಸ್ಥೆಯ ಮುಖೇನ ನೇಮಕಗೊಂಡು ಕಮಿಷನ್ ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಹೊಟೇಲ್ ಉದ್ಯಮಕ್ಕೆ ನಿರುದ್ಯೋಗಿಗಳನ್ನು ಪರಿಚಯಿಸುವ ಕೆಲ ಮಂದಿ ಬಸ್ ಚಾರ್ಜ್ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಹೊಟೇಲುಗಳಿಗೆ ಸೇರ್ಪಡೆಗೊಂಡ ಕಾರ್ಮಿಕರು ಇತರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳಂತೆ ಇಲ್ಲೂ ಕಾರ್ಯ ನಿರ್ವಹಿಸುತ್ತಾರೆ. ಹೆಚ್ಚಿನ ಅವಕಾಶಗಳು ಸಿಕ್ಕಿದಾಗ ಒಂದೆಡೆಯಿಂದ ಮತ್ತೊಂದೆಡೆಗೆ ಸೇರ್ಪಡೆಗೊಳ್ಳುತ್ತಾರೆ. ಹೀಗಿರುವಾಗ ಮಾರಾಟ-ಖರೀದಿಯ ಮಾತೆಲ್ಲಿ? ಇದು ಸಾರ್ವಜನಿಕ ಚರ್ಚೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬದುಕು ರೂಪಿಸುವುದಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಆಗಮಿಸುವ ಉದ್ಯೋಗಾರ್ಥಿಗಳ ಬಗ್ಗೆ ಕೆಲವು ಮಧ್ಯವರ್ತಿಗಳು ಲಾಭವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಯಾವುದೇ ವಿದ್ಯಾಭ್ಯಾಸದ ಹಿನ್ನಲೆಯ ಹೊರತಾಗಿಯೂ ತ್ವರಿತವಾಗಿ ಉದ್ಯೋಗ, ವಸತಿ ಮತ್ತು ಆಹಾರ ನೀಡುವ ಏಕೈಕ ತಾಣ ಅದು ಹೊಟೇಲ್ ಉದ್ಯಮ ಮಾತ್ರ ಎಂದವರು ಬಣ್ಣಿಸಿದ್ದಾರೆ.

ಮನೆ ಬಿಟ್ಟು ಓಡಿ ಬಂದ ಮಕ್ಕಳ ಸುರಕ್ಷತೆಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ವಿಶೇಷ ಜಾಗೃತ ದಳವನ್ನು ನಗರದ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಿಬೇಕು. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

ಈ ನಿಟ್ಟಿನಲ್ಲಿ ಹೊಟೇಲ್ ಸಂಘವು ಸಹಕಾರ ನೀಡಲು ಸಿದ್ಧವಿದ್ದು, ಊಟ, ವಸತಿ ಹಾಗೂ ಉದ್ಯೋಗ (ಸರ್ಕಾರ ನಿಗದಿ ಪಡಿಸಿದ ಸಂಬಳ)ವನ್ನು ಅನಕ್ಷರಸ್ಥರಿಗೂ ನೀಡುವ ಏಕೈಕ ಸಂಸ್ಥೆ ಹೊಟೇಲ್. ಇದರಿಂದ ಬಾಲಕರ ಪತ್ತೆಯೂ ಅವರ ಪೋಷಕರಿಗೆ ಸುಲಭವಾಗುತ್ತದೆ ಹಾಗೂ ಅಪರಾಧ ಪ್ರವೃತ್ತಿಗೆ ಕಡಿವಾಣ ಹಾಕಿದಂತೆಯೂ ಆಗುತ್ತದೆ. ಇದಕ್ಕೆ ರೋಟರಿ, ಲಯನ್ಸ್‌ನಂತಹ ಸಂಸ್ಥೆಗಳ ಸಹಕಾರ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಬೆಂಗಳೂರು ಹೊಟೇಲಿಗಳ ಸಂಘದ ಕಾರ್ಯದರ್ಶಿ ಪಿ.ಸಿ. ರಾವ್, ಸಂಘದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಬಾಲಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೃದ್ದೆಗೆ ದೈಹಿಕ ಹಿಂಸೆ: ಐವರ ಬಂಧನ
ಹಂದಿ ಜ್ವರ: ಪರೀಕ್ಷಾ ಕೇಂದ್ರ ಸ್ಥಾಪನೆಗೆ ಮನವಿ
ಸೋಲಿಗೆ ಹೆದರುವ ವ್ಯಕ್ತಿ ನಾನಲ್ಲ: ಬಂಗಾರಪ್ಪ
ಮುಂಗಾರು ನಿರ್ವಹಣೆ ಕಾರ್ಯಪಡೆ ರಚನೆ
ಅಭಿವೃದ್ಧಿಯೊಂದೇ ನಮ್ಮೆಲ್ಲರ ಗುರಿ: ಅನಂತ್ ಕುಮಾರ್
ಬಿಜೆಪಿ ಸರ್ಕಾರ ಸದ್ಯವೇ ಪತನ: ಸಿದ್ದು ಭವಿಷ್ಯ