ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪದ್ಮಪ್ರಿಯ ಪ್ರಕರಣ: ಕಾಂಗ್ರೆಸ್‌ನಿಂದ ಅಂಚೆಕಾರ್ಡ್ ಚಳುವಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಪ್ರಿಯ ಪ್ರಕರಣ: ಕಾಂಗ್ರೆಸ್‌ನಿಂದ ಅಂಚೆಕಾರ್ಡ್ ಚಳುವಳಿ
ಉಡುಪಿ ಶಾಸಕ ರಘಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ಅವರ ಆತ್ಮಹತ್ಯಾ ಪ್ರಕರಣವು ಹಳ್ಳಹಿಡಿದಿದೆ ಎಂದು ಆರೋಪಿಸಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್, ಈ ಕುರಿತು 'ಅಂಚ್ ಕಾರ್ಡ್' ಚಳುವಳಿ ಆರಂಭಿಸಿದೆ.

ಶಾಸಕರ ಪತ್ನಿ ಪದ್ಮಪ್ರಿಯಾ ಅವರು ಕಳೆದ ವರ್ಷ ದೆಹಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ನಿಗೂಢರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕಾರ್ನೆಲಿಯೋ ಅವರು, ಪದ್ಮಪ್ರಿಯ ಪ್ರಕರಣ ನಡೆದು ಒಂದು ವರ್ಷ ಕಳೆದಿದ್ದರೂ ಪೊಲೀಸರು ತಪ್ಪಿತಸ್ಥರನ್ನು ಪತ್ತೆ ಮಾಡುವಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ದೂರಿದರು.

ಇದೇವೇಳೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ರಾಜ್ಯಸರ್ಕಾರವನ್ನು ಕಾಂಗ್ರೆಸ್ ಒತ್ತಾಯಿಸಿದೆ. ಗೃಹಸಚಿವ ವಿ.ಎಸ್. ಆಚಾರ್ಯ ಅವರು ಸ್ಥಳೀಯ ಪೊಲೀಸರು ಪ್ರಕರಣ ಬೇಧಿಸಲು ಶಕ್ತರಾಗಿದ್ದಾರೆ ಎಂದು ಹೇಳಿದ್ದರು, ಆದರೆ ಇದುವರೆಗೆ ಯಾವುದೇ ಮುನ್ನಡೆ ಸಾಧಿಸಲಾಗಿಲ್ಲ ಎಂದು ನುಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ನೆರವಿನೊಂದಿಗೆ ಮಹಿಳಾ ಕಾಂಗ್ರೆಸ್ ಇತರ ಮಹಿಳಾ ಸಂಘಟನೆಗಳೊಂದಿಗೆ ಮುಂದಿನ 15 ದಿನಗಳಲ್ಲಿ 15 ಸಾವಿರ ಅಂಚೆಕಾರ್ಡುಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಳುಹಿಸಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ರಾಜ್ಯಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶ್ಯಾಮಲಾ ಭಂಡಾರಿ ಅವರು, ಸಿಬಿಐಗೆ ಪ್ರಕರಣವನ್ನು ಒಪ್ಪಿಸಲು ಹಿಂದೇಟು ಹಾಕಿರುವುದು, ಪ್ರಕರಣದ ಕುರಿತು ಅದಕ್ಕಿರುವ ಗಂಭೀರತೆಯ ಕುರಿತು ಸಂಶಯಗಳನ್ನು ಮೂಡಿಸುತ್ತಿದೆ ಎಂದರು. ಬಿಜೆಪಿ ಸರ್ಕಾರವು ತನ್ನ ಶಾಸಕನನ್ನು ರಕ್ಷಿಸಲು ಶತಾಯಗತಾಯ ಯತ್ನಿಸುತ್ತಿದೆ ಎಂದು ಅವರು ದೂರಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಲಸಿಗ ಸೋಮಣ್ಣಗೆ ಸಚಿವ ಸ್ಥಾನ?
"ವಿಕಾಸ್ ಸಂಕಲ್ಪ ಸಮಾವೇಶ" ಒಂದು ಸ್ಟಂಟ್‌ :ಧರ್ಮಸಿಂಗ್
ವಿಜ್ಞಾನಿ ಮಹಾಲಿಂಗಂ ಆತ್ಮಹತ್ಯೆ ಮಾಡಿಕೊಂಡರೇ?
ಹೊಟೇಲ್‌ಗಳಿಗೆ ಮಕ್ಕಳ ಮಾರಾಟ ನಡೆಯುತ್ತಿಲ್ಲ
ವೃದ್ದೆಗೆ ದೈಹಿಕ ಹಿಂಸೆ: ಐವರ ಬಂಧನ
ಹಂದಿ ಜ್ವರ: ಪರೀಕ್ಷಾ ಕೇಂದ್ರ ಸ್ಥಾಪನೆಗೆ ಮನವಿ