ರಾಜ್ಯದ ಆಡಳಿತ ಪಕ್ಷದ ದುರಾಡಳಿತವಾಗಲಿ ಅಥವಾ ಬೇರೆ ಪಕ್ಷದ ವಿರುದ್ಧ ಟೀಕೆ ಮಾಡುವುದಾಗಲಿ ಮಾಡುವುದಿಲ್ಲ. ಇನ್ನು ಮುಂದೆ ಏನಿದ್ದರು ಪಕ್ಷದ ಸಂಘಟನೆಯೊಂದೇ ನಮ್ಮ ಗುರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ಚಾಲನೆ ಮಾಡಿ ಮಾತನಾಡಿದ ಅವರು, ತಮಿಳುನಾಡು ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜ್ಯದಲ್ಲಿ ಮೂಲೆಗುಂಪು ಮಾಡಲು ಜೆಡಿಎಸ್ ಪಕ್ಷವನ್ನು ಎಲ್ಲಾ ಜಿಲ್ಲೆಗಳಲ್ಲಿ ಸಜ್ಜುಗೊಳಿಸಲಾಗುತ್ತಿದೆ ಎಂದರು.
ಇದೇ ವೇಳೆ ಕುಮಾರಸ್ವಾಮಿ, ತಾವು ಮುಖ್ಯಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಅನವಶ್ಯಕವಾಗಿ ಮಾಡಿದ್ದಲ್ಲ. ಜನರ ಕಷ್ಟ ಸುಖವನ್ನು ತಿಳಿದುಕೊಳ್ಳಲು ಮಾಡಿದ ಕಾರ್ಯಕ್ರಮವಾಗಿತ್ತು. ಇದನ್ನು ಬಿಜೆಪಿ ಸರ್ಕಾರವು ಅನುಸರಿಸುತ್ತಿದೆ. ಕೇವಲ ಕಾಪಿ ಮಾಡಿದರೆ ಸಾಲದು ಜನ ಸಾಮಾನ್ಯರ ಸಂಕಷ್ಟಗಳನ್ನು ಬಗೆಹರಿಸಬೇಕು ಎಂದರು. |