ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮಾತಿನ ಶೈಲಿ ಬದಲಿಸಿಕೊಳ್ಳದಿದ್ದರೆ ತಾನೂ ಸಹ ತನ್ನ ಶೈಲಿಯನ್ನು ಬದಲಿಸಬೇಕಾಗುತ್ತದೆ ಎಂಬುದಾಗಿ ಶಿವಮೊಗ್ಗ ಕ್ಷೇತ್ರದ ಸಂಸದ, ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಸೋಮಿನಕೊಪ್ಪ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಬಿಜೆಪಿ ಗೆಲ್ಲಲು 100 ಕೋಟಿ ರುಪಾಯಿ ಖರ್ಚು ಮಾಡಿದೆ. ಹಣ, ಹೆಂಡ ಹಂಚಿದೆ" ಎಂಬ ಬಂಗಾರಪ್ಪರ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿದ್ದಾರೆ. " ಬಂಗಾರಪ್ಪ ಬಗ್ಗೆ ತನಗೆ ಅಪಾರ ಗೌರವವಿದೆ. ಅವರು ಹಿರಿಯರು ಎನ್ನುವ ಕಾರಣಕ್ಕೆ ಇದುವರೆಗೂ ಗೌರವ ನೀಡುತ್ತಲೇ ಬಂದಿದ್ದೇನೆ. ಚುನಾವಣೆ ವೇಳೆಯಲ್ಲಿ ಕೂಡಾ ಅಪ್ಪಿತಪ್ಪಿಯೂ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲುಗೆಲುವು ಸಹಜ. ಜನತೆಯ ತೀರ್ಪಿಗೆ ತಲೆಬಾಗಬೇಕು. ಸೋತಿರುವ ಅವರು ತನ್ನ ಸೋಲೊಪ್ಪಿಕೊಂಡು ನಮ್ಮ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲ ನೀಡಲಿ" ಎಂದು ರಾಘವೇಂದ್ರ ಹೇಳಿದರು. ಬಂಗಾರಪ್ಪ ಅವರು ಇನ್ನೂಇನ್ನೂ ಹೀಗೆಯೇ ಮಾತಾನಾಡುವುದನ್ನು ಮುಂದುವರಿಸಿದರೆ, ತಾನು ಸಹ ಇದಕ್ಕೆ ತಕ್ಕಂತೆ ಉತ್ತರಿಸಬೇಕಾಗಿದೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ. |