ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಿಗರು ಬುದ್ಧಿವಂತರು ಅಂದ್ಕೊಂಡಿದ್ದೆ!: ಎಚ್‌ಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿಗರು ಬುದ್ಧಿವಂತರು ಅಂದ್ಕೊಂಡಿದ್ದೆ!: ಎಚ್‌ಡಿಕೆ
ಬೆಂಗಳೂರಿಗರು ಜೆಡಿಎಸ್‌ಗೆ ತಕ್ಕ ಶಾಸ್ತಿ ಮಾಡಿದರು...
kumaraswamy
NRB
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಪ್ರಜ್ಞಾವಂತ ಮತದಾರರು ತಮ್ಮ 'ಕೈ'ಬಿಡುವುದಿಲ್ಲ ಎಂಬ ತುಂಬು ವಿಶ್ವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ತುಂಬಾ ನಿರಾಸೆ ವ್ಯಕ್ತಪಡಿಸಿ ಬೆಂಗಳೂರಿಗರ ವಿರುದ್ಧ ಕಿಡಿಕಾರಿದ್ದಾರೆ. 'ಈ ಬಾರಿ ಜೆಡಿಎಸ್‌‌‌ಗೆ ಜನ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಲಿ' ನಂತರ ನನ್ನ ತಾಕತ್ತು ಏನಂತ ತೋರಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುಡುಗಿದ್ದರು. ಆದರೆ ಫಲಿತಾಂಶ ಹೊರಬಿದ್ದ ಮೇಲೆ ದೇವೇಗೌಡರು ಗಾಯಬ್ ಆಗಿದ್ದರು!

'ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಿತ್ತು. ಅದರಲ್ಲಿ ಫ್ಲೈಓವರ್, ರಸ್ತೆ ಜೋಡಣೆ, ಅಂಡರ್‌ಪಾಸ್‌ಗಳೂ ಸೇರಿದ್ದವು. ಆ ನಿಟ್ಟಿನಲ್ಲಿ ನಾನು ಬೆಂಗಳೂರಿನ ಮತದಾರರು ತುಂಬಾ ಬುದ್ದಿವಂತರು ಅಂತ ಭಾವಿಸಿದ್ದೆ'. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಪುಟ್ಟೇನಹಳ್ಳಿಯಲ್ಲಿ ನನಗೆ ಬಿದ್ದ ಮತ ಕೇವಲ 25! ಭಾರತೀಯ ಜನತಾ ಪಕ್ಷಕ್ಕೆ 600ಮತಗಳು ಬಿದ್ದಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ತಮ್ಮ ಬೇಗುದಿಯನ್ನು ಹೊರಹಾಕಿದ ಪರಿ ಇದು.

ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿಗರು ಜೆಡಿಎಸ್‌ ಪಕ್ಷವನ್ನು ತಿರಸ್ಕರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಎಚ್‌ಡಿಕೆ, ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಮತ್ತೆ ಬಲಪ್ರದರ್ಶನ ತೋರ್ಪಡಿಸುವ ನಿರೀಕ್ಷೆಯಲ್ಲಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬೆಂಗಳೂರು ಮತದಾರರಿಗಿಂತ ಹೊರವಲಯದ ಜನರು ಜೆಡಿಎಸ್ ಕೈಬಿಡಲಾರರು ಎಂಬ ಆಶಯ ಅವರದ್ದು.

ಬೆಂಗಳೂರಿನಲ್ಲಿಯೇ ಜೆಡಿಎಸ್ ಪ್ರಮುಖವಾಗಿ ಸೋಲಲು ಕಾರಣ ಏನು?ಎಂಬ ಬಗ್ಗೆ ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಂಗಳೂರಿನ ಜನರಿಗಾಗಿ ಜೆಡಿಎಸ್ ಇನ್ನು ಏನು ಮಾಡಬೇಕಾಗಿದೆ ಎಂಬುದರ ಬಗ್ಗೆಯೂ ಅವಲೋಕನ ಮಾಡುವುದಾಗಿ ಹೇಳಿದರು.

'ನನ್ನ ಮುಖ್ಯಮಂತ್ರಿ ಅವಧಿಯಲ್ಲಿಯೇ ಬಿಬಿಎಂಪಿ ಆಯುಕ್ತರನ್ನಾಗಿ ಎಸ್.ಸುಬ್ರಹ್ಮಣ್ಯ(ಈಗ ಕೃಷಿ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ) ಅವರನ್ನು ನೇಮಿಸಿದ್ದೆ. ಆ ಸಂದರ್ಭದಲ್ಲಿ ತುಂಬಾ ಅಭಿವೃದ್ಧಿ ಕಾರ್ಯಗಳು ನಡೆದಿತ್ತು. ಆದರೆ ಏನು ಮಾಡುವುದು ಬೆಂಗಳೂರಿನ ಮತದಾರರು ಜೆಡಿಎಸ್‌ಗೆ ತಕ್ಕ ಶಾಸ್ತಿ ಮಾಡಿದರು...ಜೆಡಿಎಸ್ ಕೈ ಬಲಪಡಿಸಲು ಮುಂದಾಗಲೇ ಇಲ್ಲ. ಇದರಿಂದಾಗಿ ತನ್ನ ಮನಸ್ಸಿಗೆ ಆಗಾಧ ನೋವು ಉಂಟಾಯಿತು ಎಂದು ತಮ್ಮ ಅಳಲನ್ನು ಬಿಚ್ಚಿಟ್ಟಿದ್ದಾರೆ.

ಜೆಡಿಎಸ್ ಸೋಲಿನಿಂದ ತೀರಾ ಕಂಗೆಟ್ಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಬೆಂಗಳೂರಿಗರ ಮೇಲೆ ಹರಿಹಾಯ್ದಿರುವುದು ಎರಡನೇ ಬಾರಿ. ಇದಕ್ಕೂ ಮುನ್ನ ಜೆಡಿಎಸ್ ಕಳೆದ (2008-ನವೆಂಬರ್ 17ರಂದು) ಬಾರಿ ನಗರದಲ್ಲಿ ಆಯೋಜಿಸಿದ ಸಮಾವೇಶ ಸಂದರ್ಭದಲ್ಲಿ ಉಂಟಾದ ಟ್ರಾಫಿಕ್ ಜಾಮ್‌ನಿಂದ ಅನುಭವಿಸಿದ ನರಕಯಾತನೆಗೆ ಬೆಂಗಳೂರಿಗರು ಅತಿಯಾದ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದರು.

ಸಂಚಾರ ವ್ಯವಸ್ಥೆಯ ಗೊಂದಲಕ್ಕೆ ಅಧಿಕಾರಿಗಳೇ ಕಾರಣ. ನಾನು ನಗರ ಪೊಲೀಸ್ ಆಯುಕ್ತರನ್ನು ಖುದ್ದಾಗಿ ಭೇಟಿಯಾಗಿದ್ದೇನೆ. ಕಾರ್ಯಕ್ರಮದ ವಿವರಗಳನ್ನು ತಿಳಿಸಿ ಅಗತ್ಯ ಪೊಲೀಸರನ್ನು ನಿಯೋಜಿಸಲು ಶುಲ್ಕವನ್ನೂ ನೀಡಿದ್ದೇನೆ. ಆದರೆ ಅವರು ಕ್ರಮ ಕೈಗೊಳ್ಳಲಿಲ್ಲ. ಈ ಎಲ್ಲ ಗೊಂದಲಗಳಿಗೆ ಸರ್ಕಾರವೇ ಹೊಣೆ ಎಂದು ತಿರುಗೇಟು ನೀಡಿದ್ದರು.

ಅರಮನೆ ಮೈದಾನದಲ್ಲಿ ರ‌್ಯಾಲಿ ಮಾಡಿದವರು ನಾವು ಮಾತ್ರ ಅಲ್ಲ. ಬಿಜೆಪಿ ಕೂಡಾ ಇಲ್ಲಿ ಸಮಾವೇಶ ಮಾಡಿತ್ತು.ಇದರಿಂದಲೂ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಾಕ್ ಸಂಗೀತ ನಡೆದಾಗಲೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಆದರೆ ಯಾರೊಬ್ಬರು ಮಾತನಾಡಲಿಲ್ಲ. ಯಾಕೆಂದರೆ ಅವರೆಲ್ಲ ಮಜಾ ಮಾಡಲು ಹೋಗಿದ್ದರು ಎಂದು ಟೀಕಿಸಿದ್ದರು.

ಸಣ್ಣ ಅನನುಕೂಲವೂ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಇದರಿಂದ ಬೆಂಗಳೂರಿಗರಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಆದರೆ ಗ್ರಾಮೀಣ ಜನರಿಗೆ ಈ ಆದ್ಯತೆ ಇಲ್ಲ. ಕೇವಲ 2-3 ಗಂಟೆಯ ತೊಂದರೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರೆ ಗ್ರಾಮೀಣ ಜನರು ಏನೂ ಮಾಡಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅಗತ್ಯ ಬಿದ್ದಾಗ ಮುಂದೆಯೂ ರ‌್ಯಾಲಿ ನಡೆಸುತ್ತೇನೆ ಎಂದು ಸವಾಲು ಹಾಕಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಸ್ಕಾನ್‌ಗೆ ಅನುದಾನ ನೀಡ್ಬೇಡಿ: ಡಿ.ಕೆ.ಶಿವಕುಮಾರ್
ಆದೇಶ ಜಾರಿ ಮಾಡಿ: ಸರ್ಕಾರಕ್ಕೆ ಹೈಕೋರ್ಟ್
ಬಂಗಾರಪ್ಪ ಬಾಯಿಗೆ ಬಂದಂತೆ ಮಾತಾಡದಿರಲಿ: ಬಿವೈಆರ್
ರೆಡ್ಡಿ ಬ್ರದರ್ಸ್ ರಾಜಿ ಓಕೆ, ಶೆಟ್ಟರ್ ಕೋಪ ಯಾಕೆ?
ಪಕ್ಷದ ಸೋಲಿಗೆ ಹೈಕಮಾಂಡ್ ಹೊಣೆ: ಬಂಗಾರಪ್ಪ
ರಾಷ್ಟ್ರೀಯ ಪಕ್ಷಗಳನ್ನು ಮ‌ೂಲೆಗೆ ತಳ್ಳುವೆ: ಕುಮಾರ್