ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲುಪ್ರಸಾದ್ ಯಾದವ್‌ಗೆ ಯುವತಿಯೊಬ್ಬಳು ಪ್ರೇಮಿಸುತ್ತಿರುವುದಾಗಿ ಬಹಿರಂಗವಾಗಿ ಹೇಳಿಕೊಂಡ ಘಟನೆ ನೆನಪಿನಿಂದ ಮಾಸುವ ಮುನ್ನ ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮೊಬೈಲ್ ಕರೆ ಮಾಡಿ ಕಿರಿಕ್ ಮಾಡುತ್ತಿದ್ದ ಯುವತಿಯೊಬ್ಬಳನ್ನು ಬಂಧಿಸಿದ ಘಟನೆ ನಡೆದಿದೆ.ನಂದಿನಿ ಬಡಾವಣೆಯ ಲಕ್ಷ್ಮೀದೇವಿ ನಗರದ ನಿವಾಸಿ ಜಯಲಕ್ಷ್ಮೀ (29) ಬಂಧಿತ ಆರೋಪಿ. ಈಕೆ ಪಿಯುಸಿ ಪೂರೈಸಿದ್ದು, ನಿರುದ್ಯೋಗಿಯಾಗಿದ್ದಳು. ಬಂಧಿತಳನ್ನು ನ್ಯಾಯಾಲಯಕ್ಕೆ ಒಪ್ಪಿಸಿರುವ ಪೊಲೀಸರು 9ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ 8 ತಿಂಗಳಿನಿಂದ ಕುಮಾರಸ್ವಾಮಿ ಅವರ ಮೊಬೈಲ್‌ಗೆ ಕರೆ ಮಾಡಿ ರಾಜಕೀಯದ ಬಗ್ಗೆ ಅಲ್ಲದೇ ಪೊಲೀಸ್ ಕೆಲಸ ಕೊಡಿಸುವಂತೆ ಜೀವ ತಿನ್ನುತ್ತಿದ್ದಳಂತೆ! ಇದರಿಂದಾಗಿ ಮಾಜಿ ಸಿಎಂ ಕೆಲವು ತಿಂಗಳ ಕಾಲ ನಿದ್ದೆಯಿಲ್ಲದೆ ದಿನ ಕಳೆಯುವಂತಾಗಿದ್ದಂತೆ!ಈ ಮೊಬೈಲ್ ಯುವತಿಯ ಕಾಟದ ಬಗ್ಗೆ ಕುಮಾರಸ್ವಾಮಿಯವರು ಸದಾಶಿವನಗರ ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರು. ನಂತರ ಪೊಲೀಸರು ಯುವತಿಯ ಮೊಬೈಲ್ ಕರೆಗಳನ್ನು ಅನುಸರಿಸಿ ನಂತರ ಮೊಬೈಲ್‌ನಲ್ಲಿ ಪ್ರೀತಿ ಮಾಡುವ ನಾಟಕ ಆರಂಭಿಸಿದ್ದಾರೆ. ಅದರಂತೆ ವೈಯಾಲಿಕಾವಲ್ ಭಜನಾ ಮಂದಿರದ ಬಳಿ ಯುವತಿ ಮನೆ ಇರುವ ಅಂಶವನ್ನು ಪತ್ತೆಹಚ್ಚಿ ಬಂಧಿಸಿದ್ದರು.ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಬಂದು ಪೊಲೀಸ್ ಪೇದೆಯ ಕೆಲಸ ಕೊಡಿಸುವಂತೆ ಕುಮಾರಸ್ವಾಮಿ ಅವರಿಗೆ ಅರ್ಜಿ ಕೊಟ್ಟಿದ್ದಳು. ಆದರೆ ಸರ್ಕಾರಿ ಕೆಲಸ ಕೊಡಿಸುವುದು ಅಸಾಧ್ಯ ಹಾಗಾಗಿ ಖಾಸಗಿ ವ್ಯಾಪಾರ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದರು. ಆದರೆ, ಯುವತಿ ಇದೇ ವೇಳೆ ಮೊಬೈಲ್ ಸಂಖ್ಯೆ ಪಡೆದು ಪದೇ ಪದೇ ಕಾಟ ಕೊಡಲು ಆರಂಭಿಸಿದ್ದಳು! |