ಉದ್ಯಾನನಗರಿಗೆ ಗುರುವಾರ ಅಮೆರಿಕದಿಂದ ಬಂದಿಳಿದ 12 ವರ್ಷದ ಬಾಲಕ ಹಾಗೂ ಬ್ಯಾಂಕಾಕ್‌ನಿಂದ ಬಂದಿರುವ ಇಬ್ಬರಿಗೆ ಎಚ್1ಎನ್1 ಸೋಂಕು ಇರುವುದು ಪತ್ತೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕದಿಂದ ಬಂದಿದ್ದ ಇಬ್ಬರಲ್ಲಿ ಹಂದಿಜ್ವರದ ಸೋಂಕು ಪತ್ತೆಯಾಗಿತ್ತು.
ಮೂರು ಮಂದಿಯನ್ನು ನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಜನರ ರಕ್ತ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸೋಂಕು ಪತ್ತೆಯಾಗಿರುವ ಮೂರು ಮಂದಿ ಅಮೆರಿಕ ಮತ್ತು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಒಟ್ಟು ಈವರೆಗೆ ಐದು ಮಂದಿಗೆ ಎಚ್1ಎನ್1 ಸೋಂಕು ಇರುವ ಧನಾತ್ಮಕ ಅಂಶ ಪತ್ತೆಯಾದಂತಾಗಿದೆ. |